“ಭಾರತದ ಔಷಧೀಯ ಉದ್ಯಮವು ವಿಶ್ವದಲ್ಲೇ ಅತ್ಯಂತ ವಿಶ್ವಾಸಾರ್ಹ ಮತ್ತು ಸಮರ್ಥನೀಯವಾಗಿದೆ” | ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು 4ನೆಯ ವರ್ಷದ ಪದವಿ ಪ್ರಧಾನ ಸಮಾರಂಭ
ತುಮಕೂರು: ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ವತಿಯಿಂದ ಪ್ರಸಕ್ತ ಸಾಲಿನ ನಾಲ್ಕನೆಯ ವರ್ಷದ ಪದವಿ ಪ್ರಧಾನ ಸಮಾರಂಭವು ಡಾ. ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳು ಮತ್ತು ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳವರ ದಿವ್ಯ ಆಶೀರ್ವಾದದೊಂದಿಗೆ ಎಸ್ಐಟಿ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ನೆರವೇರಿತು.
ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆ ವಹಿಸಿದ ಡಾ.ಎಸ್.ಸಚ್ಚಿದಾನಂದ, ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು, ಕಾರ್ಯನಿರ್ವಾಹಕ ನಿರ್ದೇಶಕರು, ಸಿದ್ದಗಂಗಾ ಮೆಡಿಕಲ್ ಕಾಲೇಜು , ತುಮಕೂರು ಮತ್ತು ಮಾಜಿ ಉಪಕುಲಪತಿಗಳು, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು.ಇವರು ಪದವಿ ಪ್ರದಾನ ಸಮಾರಂಭವನ್ನು ಮುಕ್ತವೆಂದು ಘೋಷಿಸಿ ನಂತರ ಕೊನೆಯಲ್ಲಿ ವಿಸರ್ಜಿಸಲಾಗಿದೆ ಎಂದು ಘೋಷಿಸಿದರು. ಹಾಗು ತಮ್ಮ ಭಾಷಣದಲ್ಲಿ ಆಧುನಿಕ ಆರೋಗ್ಯ ಸೇವೆಯಲ್ಲಿ ಫಾರ್ಮಸಿಸ್ಟ್ ಪಾತ್ರ ಮತ್ತು ‘ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ’ ನುಡಿಗಟ್ಟುವಿನ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಎಸ್ ಪಿ ಧನಬಾಲ್, ಪ್ರಾಂಶುಪಾಲರು, ಜೆಎಸ್ಎಸ್ ಫಾರ್ಮಸಿ ಕಾಲೇಜು. ಊಟಿ, ನೀಲಗಿರಿ, ತಮಿಳುನಾಡು ಮತ್ತು ಶ್ರೀ ಹರೀಶ್ ಕೃಷ್ಣಪ್ಪ, ಜನರಲ್ ಮ್ಯಾನೇಜರ್, ಯುನಿಟ್-3 ಪ್ಲಾಂಟ್ ಹೆಡ್, ಮೆಡ್ರೀಚ್, ಬೆಂಗಳೂರು ಭಾಗವಹಿಸಿದ್ದರು. ಡಾ.ಧನಬಾಲ್ ರವರು ಮಾತನಾಡಿ ಪದವೀಧರರಿಗೆ ಉದ್ಯಮದಲ್ಲಿ ಯಶಸ್ಸು ಕಾಣಲು ಬದ್ಧತೆ, ತಾಳ್ಮೆ ಮತ್ತು ಸಮರ್ಪಣೆ ಅಗತ್ಯವೆಂದು ತಿಳಿಸಿದರು ಮತ್ತು ಸಮಯ ಮತ್ತು ಹಣದ ಹೆಚ್ಚಿನ ಹೂಡಿಕೆಯಿಂದಾಗಿ ಭಾರತವು ಪ್ರಪಂಚದ ಔಷಧಾಲಯವಾಗಿದೆ ಎಂದು ಶ್ರೀ ಹರೀಶ್ ಕೃಷ್ಣಪ್ಪರವರು ವಿವರಿಸಿದರು.
ಗೌರವ ಅತಿಥಿಗಳಾಗಿ ಟಿ.ಕೆ.ನಂಜುಂಡಪ್ಪ, ಸನ್ಮಾನ್ಯ ಕಾರ್ಯದರ್ಶಿ, ಎಸ್ಎಸ್ಇಎಸ್ ಮತ್ತು ಡಾ.ಶಿವಕುಮಾರಯ್ಯ, ಜಂಟಿ ಕಾರ್ಯದರ್ಶಿ, ಎಸ್ ಎಸ್ ಇ ಎಸ್ ರವರು ಆಗಮಿಸಿದ್ದರು.
ಸಮಾರಂಭದಲ್ಲಿ 90 ಬಿ.ಫಾರ್ಮ್, 34 ಎಂ.ಫಾರ್ಮ್. ಮತ್ತು 24 ಫಾರ್ಮ.ಡಿ. ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಧಾನ ಮಾಡಲಾಯಿತು.
ಸಮಾರಂಭದ ಮೇಲುಸ್ತುವಾರಿಯನ್ನು ಡಾ. ಸುರೇಶ ವಿ ಕುಲ್ಕರ್ಣಿ,ಪ್ರಾಂಶುಪಾಲರು, ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಹಾಜರಿದ್ದರು. ಸಮಾರಂಭವು ಆವಾಹನೆ ಮತ್ತು ನಾಡ ಗೀತೆಯೊಂದಿಗೆ ಆರಂಭಿಸಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97