ಪರಿಶೀಲನೆ: ಸಂಘರ್ಷ ಪೀಡಿತ ಗಾಝಾಕ್ಕೆ ವಿಶ್ವಸಂಸ್ಥೆಯ ಅಧಿಕಾರಿಗಳ ಭೇಟಿ
ಸಂಘರ್ಷ ಪೀಡಿತ ಗಾಝಾಕ್ಕೆ ಭೇಟಿ ನೀಡಿರುವ ವಿಶ್ವಸಂಸ್ಥೆಯ ಆಫೀಸ್ ಫಾರ್ ಕಾರ್ಡಿನೇಷನ್ ಆಫ್ ಹ್ಯೂಮಾನಿಟೇರಿಯನ್ ಅಫೇರ್ಸ್ ನ ಮುಖ್ಯಸ್ಥ ಜಾರ್ಜಿಯಸ್ ಪೆಟ್ರೋ ಪೌಲೋಸ್ ಅವರು ಅಲ್ಲಿನ ದೃಶ್ಯವನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ 1945ರಲ್ಲಿ ನಾಗಸಾಕಿಗೆ ಅಮೆರಿಕಾದ ಸೇನೆ ಅಣುಬಾಂಬ್ ಹಾಕಿದ ಬಳಿಕದ ಸ್ಥಿತಿಯು ಗಾಝಾದ ಅಲ್ ಮವಾಸಿ ನಿರಾಶ್ರಿತ ಶಿಬಿರದ್ದಾಗಿದೆ ಎಂದವರು ಹೇಳಿದ್ದಾರೆ. ಈ ಶಿಬಿರದ ಮೇಲೆ ಇಸ್ರೇಲ್ ಹಾಕಿದ ಬಾಂಬ್ ದಾಳಿಯಿಂದಾಗಿ ಮೃತ ದೇಹಗಳು ಆವಿಯಾಗಿವೆ ಎಂಬ ಭಯಾನಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.
ಇಸ್ರೇಲ್ ನ ಪತ್ರಿಕೆಯಾದ ಹಾರೆಟ್ಜ್ ee ಮಾಹಿತಿಯನ್ನು ಬಹಿರಂಗಪಡಿಸಿದೆ. ಅಲ್ ಮವಾಸಿ ಶಿಬಿರದ ಮೇಲೆ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿಯಲ್ಲಿ ಜನರ ದೇಹ ಆವಿಯಾಗಿ ಹೋಗಿದೆ ಎಂದು ಅವರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಈ ಅಲ್ ಮವಾಸಿ ಶಿಬಿರವನ್ನು ಇಸ್ರೇಲ್ ಸುರಕ್ಷಿತ ಸ್ಥಳ ಎಂದು ಹೇಳಿತ್ತು ಮತ್ತು ಗಾಝಾದ ಜನರು ಇಲ್ಲಿ ನೆಲೆಸುವಂತೆ ಆದೇಶಿಸಿತ್ತು. ಆದರೆ ಇಲ್ಲಿ ನೆಲೆಸಿದವರನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.
ಈ ಶಿಬಿರದಲ್ಲಿದ್ದ 22 ಮಂದಿಯ ಯಾವುದೇ ಅವಶೇಷಗಳೂ ಅಲ್ಲಿ ಉಳಿದಿಲ್ಲ. ಈ ಬಾಂಬು ಸ್ಫೋಟದ ಸ್ಥಳಕ್ಕೆ ಹೋದ ಬಳಿಕ ನಾನು ಹತ್ತಿರದ ಆಸ್ಪತ್ರೆಗೆ ಹೋದೆ. ಅದೊಂದು ಕಸಾಯಿ ಕಾನೆಯಂತಿತ್ತು. ಎಲ್ಲೆಡೆಯೂ ರಕ್ತವೇ ತುಂಬಿತ್ತು ಎಂದವರು ತನ್ನ ಅನುಭವವನ್ನು ಹಂಚಿಕೊಂಡಿರುವುದನ್ನು ಪತ್ರಿಕೆ ವಿವರಿಸಿದೆ.
ಈ ಅಲ್ ಮವಾಸಿ ಶಿಬಿರದ ಮೇಲೆ ಸೆಪ್ಟೆಂಬರ್ ನವಂಬರ್ ಡಿಸೆಂಬರ್ ತಿಂಗಳಲ್ಲಿ ಒಟ್ಟು ಎಂಟು ಬಾರಿ ಇಸ್ರೇಲ್ ಬಾಂಬುದಾಳಿ ನಡೆಸಿದೆ. ಡಿಸೆಂಬರ್ 4ರಂದು 21 ಟೆಂಟುಗಳ ಮೇಲೆ ಇಸ್ರೇಲ್ ಬಾಂಬು ಸುರಿಸಿ 232 ಮಂದಿಯನ್ನು ಸಾಯಿಸಿದೆ. 907 ಕಿಲೋ ಗ್ರಾಂ ಭಾರದ ಮತ್ತು ಅಮೆರಿಕ ನಿರ್ಮಿತ ಎಂಕೆ 84 ಬಾಂಬುಗಳನ್ನು ಇಲ್ಲಿ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj