ತಂದೆ—ಮಗನ ಮೇಲೆ ಕಾಡಾನೆ ದಾಳಿ: ತಂದೆಯ ದಾರುಣ ಸಾವು, ಮೃತದೇಹದ ಬಳಿ ಸುತ್ತಾಡಿದ ಕಾಡಾನೆ
ಚಿಕ್ಕಮಗಳೂರು: ಕಾಫಿನಾಡಲ್ಲಿ ಆನೆ ದಾಳಿ(Elephant Attack)ಗೆ ಮತ್ತೊಂದು ಬಲಿಯಾಗಿದೆ. 20 ದಿನಗಳಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು ಸಂಭವಿಸಿದೆ. ತೋಟಕ್ಕೆ ಹೋಗಿದ್ದ ತಂದೆ–ಮಗನ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ಆದರೆ ತಂದೆಯನ್ನು ಕಾಡಾನೆ ಬಲಿಪಡೆದಿದೆ.
ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಈ ಘಟನೆ ಎಲಿಯಾಸ್ (75) ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡವರಾಗಿದ್ದಾರೆ. ಇವರ ಮಗ ವರ್ಗೀಸ್ ಅಪಾಯದಿಂದ ಪಾರಾಗಿದ್ದಾರೆ.
ಎಲಿಯಾಸ್ ಅವರು ಕೇರಳದಿಂದ ಬಂದು ಅಡಿಕೆ–ಬಾಳೆ ತೋಟ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಎಲಿಯಾಸ್ ಅವರ ಪ್ರಾಣ ಬಲಿಪಡೆದ ಬಳಿಕವೂ ಕಾಡಾನೆಯ ರೋಷಾವೇಷ ನಿಂತಿಲ್ಲ. ಮೃತದೇಹವನ್ನು ಸುತ್ತುತ್ತಾ, ಕಾಲಿನಿಂದ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ಸುತ್ತುತ್ತಿತ್ತು ಎಂದು ಹೇಳಲಾಗಿದೆ.
ಎರಡನೇ ಬಲಿ:
ನವೆಂಬರ್ 30ರಂದು ಸೀತೂರಲ್ಲಿ ಉಮೇಶ್ ಎಂಬುವರನ್ನ ಕಾಡಾನೆ ಸಾಯಿಸಿತ್ತು. ಇಂದು ಮಡಬೂರಲ್ಲಿ ಎಲಿಯಾಸ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬಲಿ ಪಡೆದಿದೆ. ಕಾಡಾನೆ ದಾಳಿ ವಿರುದ್ಧ ಆಕ್ರೋಶಗೊಂಡಿರುವ ಮಲೆನಾಡಿಗರು, ಅರಣ್ಯ ಇಲಾಖೆ(Forest Department) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲೇ ಸ್ಥಳೀಯರು, ಪೊಲೀಸರು, ಅರಣ್ಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಚಿಕ್ಕಮಗಳೂರು(Chikmagalur) ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ಸಂಭವಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: