ಇಡಿ & ಬ್ಯಾಂಕ್‌ಗಳು ತಮ್ಮ ಸಾಲದ ಪ್ರಮಾಣಕ್ಕಿಂತಲೂ ಎರಡು ಪಟ್ಟು ಹೆಚ್ಚು ಹಣವನ್ನು ವಸೂಲಿ ಮಾಡಿವೆ: ಉದ್ಯಮಿ ವಿಜಯ್ ಮಲ್ಯ ಆರೋಪ
ಇ.ಡಿ ಹಾಗೂ ಬ್ಯಾಂಕ್‌ಗಳು ತಮ್ಮ ಸಾಲದ ಪ್ರಮಾಣಕ್ಕಿಂತಲೂ ಎರಡು ಪಟ್ಟು ಹೆಚ್ಚು ಹಣವನ್ನು ವಸೂಲಿ ಮಾಡಿವೆ ಎಂದು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಪ್ರಕರಣದಲ್ಲಿ ಹಲವು ಬ್ಯಾಂಕ್‌ಗಳಿಂದ 9 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡ ಆರೋಪ ಕೇಳಿಬಂದ ಬೆನ್ನಲ್ಲೇ ವಿಜಯ್ ಮಲ್ಯ 2016ರಲ್ಲಿ ಬ್ರಿಟನ್‌ಗೆ ಪಲಾಯನಗೈದಿದ್ದರು.
‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ, “ಕಿಂಗ್‌ಫಿಷರ್ ಏರ್‌ಲೈನ್ಸ್ ಪ್ರಕರಣದಲ್ಲಿ ಸಾಲದ ಅಸಲು 6,203 ಕೋಟಿ ರೂ. ಹಾಗೂ ಇದಕ್ಕೆ ಬಡ್ಡಿ 1,200 ಕೋಟಿ ರೂ. ಆಗಲಿದೆ ಎಂದು ಸಾಲ ವಸೂಲಾತಿ ನ್ಯಾಯಮಂಡಳಿಯೇ ಹೇಳಿದೆ. ಈ ಸಂಬಂಧ ನನ್ನಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದರೂ ನಾನಿನ್ನೂ ಆರ್ಥಿಕ ಅಪರಾಧಿಯಾಗಿದ್ದೇನೆ,” ಎಂದು ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಇ.ಡಿ. ಮತ್ತು ಬ್ಯಾಂಕ್‌ಗಳು ಎರಡು ಪಟ್ಟು ಹೆಚ್ಚು ಸಾಲದ ಮೊತ್ತವನ್ನು ಹೇಗೆ ತೆಗೆದುಕೊಂಡಿವೆ ಎಂಬ ಬಗ್ಗೆ ಕಾನೂನಾತ್ಮಕವಾಗಿ ಸಮರ್ಥಿಸಿಕೊಳ್ಳಬೇಕಿದೆ. ಇಲ್ಲವಾದರೆ ನಾನು ಕೂಡ ಪರಿಹಾರಕ್ಕೆ ಅರ್ಹನಾಗಿದ್ದೇನೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
”ನನ್ನನ್ನು ಸಾಲಗಾರನೆಂದು ಹಲವು ಮಂದಿ ನಿಂದಿಸುತ್ತಾರೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಯಾರಾದರೂ ಈ ಘೋರ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಾರೆಯೇ? ನಾನು ಹೆಚ್ಚು ಅಪಮಾನಕ್ಕೊಳಗಾಗಿದ್ದೇನೆ. ನನಗೆ ಬೆಂಬಲ ನೀಡಲು ಧೈರ್ಯ ಬೇಕಿದೆ” ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj