ಯುದ್ಧದ ಸಮಯದಲ್ಲಿ ಹಿಝ್ಬುಲ್ಲಾ ಪರ ಗೂಢಚಾರಿಕೆ ನಡೆಸಿದ್ದಾನೆ ಎಂಬ ಆರೋಪ: 19 ವರ್ಷದ ಬಾಲಕನನ್ನು ಬಂಧಿಸಿದ ಇಸ್ರೇಲ್
ಯುದ್ಧದ ಸಮಯದಲ್ಲಿ ಹಿಝ್ಬುಲ್ಲಾ ಪರ ಗೂಢಚಾರಿಕೆ ನಡೆಸಿದ್ದಾನೆ ಎಂದು ಆರೋಪಿಸಿ 19 ವರ್ಷದ ಬಾಲಕನನ್ನು ಇಸ್ರೇಲ್ ಬಂಧಿಸಿದೆ. ಪೂರ್ವ ಇಸ್ರೇಲ್ ನ ನಗರವಾದ ನಜರೆತ್ ನಲ್ಲಿ ವಾಸಿಸುತ್ತಿರುವ ಮುಹಮ್ಮದ್ ಆದಿ ಎಂಬ ಯುವಕನನ್ನು ಬಂಧಿಸಲಾಗಿದೆ.
ಇಸ್ರೇಲ್ ನ ಆಂತರಿಕ ಗುಪ್ತಚರ ಪಡೆ ಮತ್ತು ಪೊಲೀಸರು ಸೇರಿ ಈ ಬಂಧನ ನಡೆಸಿದ್ದಾರೆ. ಯುದ್ಧದ ಮಧ್ಯೆ ಈತ ಹಲವು ಹಿಝ್ಬುಲ್ಲಾವನ್ನು ಸಂಪರ್ಕಿಸಿದ್ದಾನೆ ಮತ್ತು ಹಿಝ್ಬುಲ್ಲ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಹಿಝ್ಬುಲ್ಲದೊಂದಿಗೆ ಸಂಬಂಧ ಇರುವ ಮನಾರ್ ಗೆ ಫೋಟೋ ಮತ್ತು ವಿಡಿಯೋಗಳನ್ನು ಈತ ಹಂಚಿಕೊಂಡಿದ್ದಾನೆ, ರಾಕೆಟ್ ಸ್ಥಾಪಿಸಲಾದ ಸ್ಥಳಗಳು, ವಿಮಾನಗಳ ಚಲನವಲನ, ಸೇನಾ ಯೋಧರು ಇರುವ ಸ್ಥಳಗಳು ಮುಂತಾದ ವಿವರಗಳನ್ನು ಹಂಚಿಕೆ ಮಾಡಿರುವ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj