ಆಲ್ಟ್ ನ್ಯೂಸ್ ಸ್ಥಾಪಕ ಮತ್ತು ಪತ್ರಕರ್ತ ಮುಹಮ್ಮದ್ ಝುಬೇರ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ
ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಆರೋಪವನ್ನು ಹೊತ್ತುಕೊಂಡಿರುವ ಆಲ್ಟ್ ನ್ಯೂಸ್ ಸ್ಥಾಪಕ ಮತ್ತು ಪತ್ರಕರ್ತ ಮೊಹಮ್ಮದ್ ಝುಬೇರ್ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ವಿಧಿಸಿದೆ. ಜನವರಿ ಆರರವರೆಗೆ ಅವರಿಗೆ ಬಂಧನದಿಂದ ರಕ್ಷಣೆಯನ್ನು ಒದಗಿಸಿದೆ. ಹಾಗೆಯೇ ವಿದೇಶಕ್ಕೆ ಪ್ರಯಾಣ ಮಾಡಬಾರದು ಎಂದು ಝುಬೇರ್ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಯತಿ ನರಸಿಂಗಾನಂದ ಅವರ ಬೆಂಬಲಿಗರು ಕಳೆದ ತಿಂಗಳು ಝುಬೇರ್ ವಿರುದ್ಧ ದೂರು ಸಲ್ಲಿಸಿದ್ದನ್ನು ಅನುಸರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಯತಿ ನರಸಿಂಗಾನಂದ ಅವರ ಹಳೆಯ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರ ವಿರುದ್ಧ ಮುಸ್ಲಿಮರನ್ನು ದಂಗೆಗೆ ಪ್ರಚೋದಿಸಿದ್ದಾರೆ ಎಂದು ಉದಿತಾ ತ್ಯಾಗಿ ಎಂಬವರು ದೂರು ಸಲ್ಲಿಸಿದ್ದರು. ಹಾಗೆಯೇ ಪ್ರವಾದಿ ಮುಹಮ್ಮದರ ಬಗ್ಗೆ ಯತಿ ನರಸಿಂಗಾನಂದ ಅವರ ಎಡಿಟೆಡ್ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಎಂದು ಕೂಡ ಅವರು ದೂರಿನಲ್ಲಿ ತಿಳಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj