ಇಸ್ರೇಲ್ ಪ್ರಧಾನಿ ವಿರುದ್ಧ ಅರೆಸ್ಟ್ ವಾರಂಟ್: ಪೋಲೆಂಡ್ ಭೇಟಿ ರದ್ದು ಮಾಡಿದ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿರುವ ಅರೆಸ್ಟ್ ವಾರಂಟ್ ಫಲ ಬೀರತೊಡಗಿದೆ. ಹಿಟ್ಲರ್ ನ ಬಂಧಿಖಾನೆಯಾದ ಆಸ್ಟ್ರಿಚ್ ನ ವಿಮೋಚನೆಯ 80ನೇ ವಾರ್ಷಿಕದಲ್ಲಿ ಭಾಗವಹಿಸಲು ಅವರು ಪೋಲೆಂಡ್ ಗೆ ಹೋಗಬೇಕಾಗಿತ್ತು. ಆದರೆ ಎಲ್ಲಿ ತನ್ನನ್ನು ಬಂಧಿಸಲಾಗುತ್ತದೋ ಎಂಬ ಭೀತಿಯಿಂದಾಗಿ ಅವರು ಈ ಬಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ.
ಜನವರಿ 27 ಅನ್ನು ಅಂತಾರಾಷ್ಟ್ರೀಯವಾಗಿ ಹಾಲೊಕಾಸ್ಟ್ ದಿನ ಎಂದು ಸ್ಮರಿಸಲಾಗುತ್ತದೆ. ಲಕ್ಷಾಂತರ ಮಂದಿಯನ್ನು ಸಾಯಿಸಲಾಗಿದೆ ಎಂದು ನಂಬಲಾಗುವ ಪೋಲೆಂಡಿನ ಆಸ್ಟ್ರಿಚ್ ನಲ್ಲಿದ್ದ ಬಂದೀಖಾನೆಯನ್ನು 1945 ಜನವರಿ 27ರಂದು ರಷ್ಯಾ ಸೇನೆ ವಿಮೋಚನೆ ಗೊಳಿಸಿತ್ತು. ಈ ದಿನವನ್ನು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ ಹಾಲೋಕಾಸ್ಟ್ ದಿನವಾಗಿ ಅಂಗೀಕರಿಸಿದೆ.
ಯುದ್ಧಾಪರಾಧವನ್ನು ಆರೋಪಿಸಿ ನೆತಾನ್ಯಾಹು ಮತ್ತು ಇಸ್ರೇಲ್ ನ ಮಾಜಿ ರಕ್ಷಣಾ ಸಚಿವ ಗಾಲೆಂಟ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಅರೆಸ್ಟ್ ವಾರೆಂಟನ್ನು ಹೊರಡಿಸಿತ್ತು. ಈ ನ್ಯಾಯಾಲಯದ ಭಾಗವಾಗಿರುವ 120ಕ್ಕಿಂತಲೂ ಅಧಿಕ ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರಕ್ಕೆ ನೇತನ್ಯಾಹು ಪ್ರವೇಶಿಸಿದರೂ ಅವರನ್ನು ಅರೆಸ್ಟ್ ಮಾಡಬೇಕಾಗಿದೆ. ಅಲ್ಲದೆ ನಮ್ಮ ರಾಷ್ಟ್ರಕ್ಕೆ ನೆತನ್ಯಾಹು ಪ್ರವೇಶಿಸಿದರೆ ಅವರನ್ನು ಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಹಲವು ರಾಷ್ಟ್ರಗಳು ಈಗಾಗಲೇ ಘೋಷಿಸಿವೆ. ಈ 120 ರಾಷ್ಟ್ರಗಳ ಪೈಕಿ ಹೆಚ್ಚಿನ ರಾಷ್ಟ್ರಗಳು ಯುರೋಪಿಯನ್ ರಾಷ್ಟ್ರಗಳಾಗಿವೆ. ಪೋಲೆಂಡ್ ಕೂಡ ಯುರೋಪಿಯನ್ ಯೂನಿಯನ್ ಗೆ ಸೇರಿದ್ದು ಈ ಹಿನ್ನೆಲೆಯಲ್ಲಿ ಅವರು ಬಂಧನ ಭೀತಿಯಿಂದ ಹೋಗಲು ಹಿಂಜರಿದಿದ್ದಾರೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj