ನನ್ನ ಪೋಷಕರನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ | ಸಿಡಿ ಪ್ರಕರಣದ ಸಂತ್ರಸ್ತ ಯುವತಿಯಿಂದ ಹೇಳಿಕೆ - Mahanayaka
9:26 PM Thursday 19 - September 2024

ನನ್ನ ಪೋಷಕರನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ | ಸಿಡಿ ಪ್ರಕರಣದ ಸಂತ್ರಸ್ತ ಯುವತಿಯಿಂದ ಹೇಳಿಕೆ

cd
27/03/2021

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಯುವತಿಯ ಪೋಷಕರು ಎಸ್ ಐಟಿ ಎದುರು ಹಾಜರಾಗಿದ್ದು, ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಅವರ ಕೈವಾಡ ಇದೆ ಎಂದು ಪರೋಕ್ಷವಾಗಿ ಆರೋಪಿಸಲಾಗುತ್ತಿದೆ.

ವಿಚಾರಣೆಯ ಬಳಿಕ ತಮ್ಮ ಮಗಳನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಯುವತಿಯ ಪೋಷಕರು ಹೇಳಿದ್ದಾರೆ ಎಂದು ಮಾಧ್ಯಮಗಳ ವರದಿಯ ಬೆನ್ನಲ್ಲೇ ಯುವತಿ ತನ್ನ ಹೇಳಿಕೆಯ ಐದನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.

ನಮ್ಮ ಅಪ್ಪ-ಅಮ್ಮನಿಗೆ ಏನು ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾರೆ. ಪ್ರಕರಣವನ್ನು ಬೇರೆ ಕಡೆ ತಿರುಗಿಸುತ್ತಿದ್ದಾರೆ. ನಮ್ಮವರನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಮಗಳನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರ ಹೇಳಿಕೆಯ ಬೆನ್ನಲ್ಲೇ ಯುವತಿ ವಿಡಿಯೋ ಹರಿಬಿಟ್ಟಿದ್ದಾರೆ.


Provided by

ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ. ಇನ್ನು ನಾಲ್ಕರಿಂದ ಐದು ದಿನದಲ್ಲಿ ಬರುತ್ತೇನೆ. ಇವತ್ತಿನ ಬೆಳವಣಿಗೆ ನೋಡಿದರೆ ನನಗೆ ಭಯ ಆಗುತ್ತಿದೆ. ನಾನು ಹೇಳಿಕೆ ನೀಡಲು ಭಯ ಆಗುತ್ತಿದೆ. ಅನ್ಯಾಯವಾಗಿರುವುದು ನನಗೆ. ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಲಾಗಿದೆ. ನನಗೆ ನ್ಯಾಯ ಸಿಗಬೇಕು. ನನ್ನ ಅಪ್ಪ, ಅಮ್ಮನಿಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಅವರನ್ನು ಕರೆಸಿ ವಿಚಾರಣೆ ಮಾಡುವಂತಹುದು ಏನಿತ್ತು? ಎಂದು ಯುವತಿ ಪ್ರಶ್ನಿಸಿದ್ದಾರೆ.

ನ್ಯಾಯಾಧೀಶರ ಎದುರು ಹೇಳಿಕೆ ನೀಡಲು ಅವಕಾಶ ಮಾಡಿಕೊಡಿ, ಎಂದು ಸಿಎಂ, ಗೃಹ ಸಚಿವರು, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಯುವತಿ ಮನವಿ ಮಾಡಿಕೊಂಡಿದ್ದಾರೆ.

“ಲವ್ ಜಿಹಾದ್” ಹಿಂದೂ-ಕ್ರೈಸ್ತರ ಮೇಲೆ ನಡೆಸಲಾಗುತ್ತಿರುವ ಭಯೋತ್ಪಾದನೆಯ ಇನ್ನೊಂದು ಮುಖ | ಕೇರಳದಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ!

ಇತ್ತೀಚಿನ ಸುದ್ದಿ