ಲಾರಿಗೆ ಅಪ್ಪಳಿಸಿದ ಟೆಂಪೋ;  ದೇವರ ದರ್ಶನಕ್ಕಾಗಿ ಹೋಗುತ್ತಿದ್ದ 8 ಭಕ್ತರ ಸಾವು - Mahanayaka
12:03 AM Tuesday 4 - February 2025

ಲಾರಿಗೆ ಅಪ್ಪಳಿಸಿದ ಟೆಂಪೋ;  ದೇವರ ದರ್ಶನಕ್ಕಾಗಿ ಹೋಗುತ್ತಿದ್ದ 8 ಭಕ್ತರ ಸಾವು

nellur
28/03/2021

ಅಮರಾವತಿ: ಲಾರಿ ಹಾಗೂ ಟೆಂಪೋ ನಡುವೆ ನಡೆದ ಭೀಕರ ಅಪಘಾತದಲ್ಲಿ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಭಕ್ತರು ಟೆಂಪೋ ಮೂಲಕ ಶ್ರೀಶೈಲಂ ಹಾಗೂ ಇತರ ದೇವಾಲಯಕ್ಕೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ  ಬುಚ್ಚಿರೇಡಿಪಲೆಂ ಮಂಡಲದ ದಾಮರಮಡುಗು ಗ್ರಾಮದ ಬಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಬೆಳಗ್ಗಿನ ಜಾವ 2 ಗಂಟೆಯ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಸರಕು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ 8 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 6  ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ  ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೇವರ ದರ್ಶನಕ್ಕಾಗಿ ಹೋಗುತ್ತಿದ್ದ ಭಕ್ತರು ನಡು ರಸ್ತೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ದೇವರು ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ಮೃತರ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.

“ಬಾಡಿಗೆ ಇದೆ ಈಗ ಬರುತ್ತೇನೆ” ಎಂದು ಮನೆಯಲ್ಲಿ ಹೇಳಿ ಹೋದ ಆಟೋ ಚಾಲಕ ಮತ್ತೆ ಬರಲಿಲ್ಲ!

ಇತ್ತೀಚಿನ ಸುದ್ದಿ