ಅಂದು ಮನಮೋಹನ್ ಸಿಂಗ್ ನೋವಿನಿಂದ ನುಡಿದಿದ್ದ ಮಾತು ಇಂದು ಸತ್ಯವಾಗಿದೆ!
ನವದೆಹಲಿ: 2014ರ ಸಮಯದಲ್ಲಿ ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಆಡಳಿತದಿಂದ ಕೆಳಗಿಳಿಯಿತು. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಅಧಿಕಾರಕ್ಕೇರಿತು. ಈ ವೇಳೆ ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಾ.ಸಿಂಗ್ ಆಡಿದ್ದ ಮಾತು ಇಂದು ನಿಜವಾಗಿದೆ.
ಪ್ರಪಂಚ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು ಸುಭದ್ರವಾಗಿ ಡಾ.ಸಿಂಗ್ ಎತ್ತಿ ನಿಲ್ಲಿಸಿದ್ದರು. ಆದರೂ ರಾಜಕೀಯ ಕಾರಣಗಳಿಗೆ ವಿಪಕ್ಷಗಳ ಟೀಕೆ ಇದ್ದೇ ಇತ್ತು. ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎಂದು ವಿಪಕ್ಷಗಳ ಜರೆದವು. ಅವರ ಟೀಕೆಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು ಕೂಡ. ಹೀಗಾಗಿಯೇ ಅಂದು ಯುಪಿಎ ಸರ್ಕಾರಕ್ಕೆ ಸೋಲಾಗಿತ್ತು.
ಪ್ರಧಾನಿಯಾಗಿ ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮನಮೋಹನ್ ಸಿಂಗ್, ಇಂದು ಸಂಸತ್ತಿನಲ್ಲಿ ಮಾಧ್ಯಮಗಳು ಅಥವಾ ಪ್ರತಿಪಕ್ಷಗಳು ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ, ಆದರೆ ಇತಿಹಾಸವು ನನಗೆ ನ್ಯಾಯವನ್ನು ನೀಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಹೇಳಿದ್ದರು.
ಇತಿಹಾಸ ಇಂದು ಮನಮೋಹನ್ ಸಿಂಗ್ ಅವರ ಇತಿಹಾಸವನ್ನು ನೆನಪಿಡುವಂತೆ ಮಾಡಿದೆ. ಅವರು ಅಂದು ನುಡಿದಿದ್ದ ಮಾತು, ಅವರ ನಿಧನದ ನಂತರ ಸತ್ಯವಾಗಿದೆ. ಮನಮೋಹನ್ ಸಿಂಗ್ ಅಂದು ಮಾಡಿದ್ದ ಕ್ರಾಂತಿಕಾರಿ ಆರ್ಥಿಕ ತೀರ್ಮಾನಗಳು ಇಂದಿಗೂ ಭಾರತ ಇತಿಹಾಸದಲ್ಲಿ ಅಚ್ಚಳಿಯದೇ ನಿಂತಿದೆ. ಅವರ ನೂರಾರು ಯೋಜನೆಗಳು ಇಂದಿಗೂ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಈ ನೆನಪುಗಳನ್ನು ಇಂದು ಗಣ್ಯರು ಸ್ಮರಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: