ಬಿಜೆಪಿ ಕಾರ್ಯಕ್ರಮದಲ್ಲಿ ಗಾಂಧಿಯವರ ಭಜನೆ ಹೇಳಿದ್ದಕ್ಕೆ ಕಮಲ ಪಡೆಯಿಂದ ಗಾಯಕಿಗೆ ಧಮ್ಕಿ
ಬಿಜೆಪಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಯವರ ಬಹು ಜನಪ್ರಿಯ ರಘುಪತಿ ರಾಘವ ರಾಜಾರಾಮ್ ಭಜನೆಯನ್ನು ಆಲಾಪಿಸಿದ ಗಾಯಕಿಗೆ ಬಿಜೆಪಿ ಬೆಂಬಲಿಗರು ಧಮಕಿ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ. ಆ ಬಳಿಕ ಆಕೆ ಜೈ ಶ್ರೀರಾಮ್ ಎಂದು ಘೋಷಿಸಿ ಕ್ಷಮೆಯಾಚಿಸಿದ ಪ್ರಸಂಗವೂ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಭಾಗವಾಗಿ ಪಾಟ್ನಾದಲ್ಲಿ ಡಿಸೆಂಬರ್ 25ರಂದು ನಡೆದ ಮೇ ಅಟಲ್ ರಹುಂಗಾ ಎಂಬ ಕಾರ್ಯಕ್ರಮದಲ್ಲಿ ಬಿಹಾರದ ಜನಪದ ಹಾಡುಗಾರ್ತಿ ದೇವಿ ಎಂಬವರು ಭಜನೆ ಆಲಾಪಿಸಿದರು.
ಈಶ್ವರ್ ಅಲ್ಲ ತೇರೋ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್ ಎಂಬ ಚರಣ ದೇವಿ ಹಾಡಿದ ಕೂಡಲೇ ಸಭಿಕರಲ್ಲಿ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿತು. ಆದರೆ ತಾನು ಶ್ರೀರಾಮನಲ್ಲಿಯೇ ಕರೆದು ಪ್ರಾರ್ಥಿಸುತ್ತಿರುವುದಾಗಿ ದೇವಿ ಹೇಳಿದರು. ಅವರ ಆಕ್ರೋಶ ತಣಿಯಲಿಲ್ಲ. ದೇವನು ಪ್ರತಿಯೊಬ್ಬರಿಗೂ ಸಂಬಂಧಿಸಿದವ. ರಾಮನನ್ನು ನೆನಪಿಸಿಯೇ ನಾನು ಈ ಹಾಡು ಹಾಡಿದ್ದೇನೆ. ರಾಮ ಮತ್ತು ಸೀತೆಯನ್ನು ನಾನು ನೆನಪಿಸಿಕೊಂಡಿದ್ದೇನೆ ಎಂದು ದೇವಿ ಸಮರ್ಥಿಸಿಕೊಂಡರು ಇದೇ ಸಂದರ್ಭದಲ್ಲಿ ಬಿಜೆಪಿಯ ಒಬ್ಬ ನಾಯಕ ವೇದಿಕೆಗೆ ಹತ್ತಿ ಮೈಕ್ ಪಡೆದು ಜೈ ಶ್ರೀ ರಾಮ್ ಎಂದು ಘೋಷಿಸಿದ ಗಾಯಕಿಯ ಉದ್ದೇಶ ಒಳ್ಳೆಯದೇ. ಆಗಿದೆ. ಆದ್ದರಿಂದ ಕ್ಷಮೆ ಯಾಚಿಸುವ ರೂಪದಲ್ಲಿ ಏನಾದರೂ ಹೇಳು ಎಂದು ಗಾಯಕಿಗೆ ಆತ ಆಜ್ಞಾಪಿಸಿದ.
ಆದರೆ ಜನರ ಆಕ್ರೋಶ ತಣಿಯಲಿಲ್ಲ ಅವರು ವ್ಯಂಗ್ಯ ಮಾಡಲು ಪ್ರಾರಂಭಿಸಿದರು. ಆಗ ಗಾಯಕಿ ತನ್ನನ್ನು ಸಮರ್ಥಿಸಿಕೊಂಡರು ಮತ್ತು ನಮ್ಮ ಹಿಂದೂ ಧರ್ಮವೂ ಎಲ್ಲರನ್ನೂ ಒಳಗೊಳ್ಳುತ್ತದೆ. ಹಾಡು ಕೇಳಿ ನೀವು ಬೇಸರ ಪಡಬೇಕಾದ ಅಗತ್ಯ ಇಲ್ಲ. ಒಂದು ವೇಳೆ ನಿಮಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧಳಿದ್ದೇನೆ. ನಮ್ಮ ಹಿಂದೂ ಧರ್ಮವು ವಸುದೈವ ಕುಟುಂಬಕಂ ಎಂದು ಹೇಳುತ್ತದೆ ಎಂದು ಅವರು ಹೇಳಿದರು, ಆದರೆ ಆ ಬಳಿಕವೂ ಆಕ್ರೋಶ ಜೋರಾದಾಗ ಒಂದಕ್ಕಿಂತ ಹೆಚ್ಚು ಬಾರಿ ಜಯ್ ಶ್ರೀರಾಮ್ ಎಂದು ಘೋಷಿಸಿದರು.
ತಮಾಷೆ ಏನೆಂದರೆ ಮಹಾತ್ಮ ಗಾಂಧಿಯವರ ಹೆಸರಿನ ವೇದಿಕೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಘಟನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಿಯಾಂಕ ಗಾಂಧಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj