6,000 ಕೋಟಿ ರೂ.ಗಳ ಪೊಂಜಿ ಹಗರಣದ ಆರೋಪಿಯ ಬಂಧನ: ಐಷಾರಾಮಿ ಕಾರುಗಳು ವಶಕ್ಕೆ
6,000 ಕೋಟಿ ರೂ.ಗಳ ಪೊಂಜಿ ಹಗರಣದ ಮುಖ್ಯ ಆರೋಪಿಯನ್ನು ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಮೆಹ್ಸಾನಾ ಜಿಲ್ಲೆಯ ಗ್ರಾಮದಿಂದ ಬಂಧಿಸಿದೆ.
ಸಬರ್ಕಾಂತ ಮೂಲದ ಬಿಜೆಡ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಬಿಜೆಡ್ ಗ್ರೂಪ್ ನ ಸಿಇಒ ಭೂಪೇಂದ್ರ ಸಿಂಗ್ ಝಾಲಾ ಅವರನ್ನು ಸಿಐಡಿ ಪತ್ತೆ ಹಚ್ಚಿದೆ. ಹಗರಣ ಬೆಳಕಿಗೆ ಬಂದ ನಂತರ ಭೂಪೇಂದ್ರ ಸಿಂಗ್ ನಾಪತ್ತೆಯಾಗಿದ್ದರಿಂದ ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು.
ಮೆಹ್ಸಾನಾದ ದಾವ್ಡಾ ಗ್ರಾಮದ ತೋಟದ ಮನೆಯಲ್ಲಿ ಭೂಪೇಂದ್ರ ಸಿಂಗ್ ಅವರನ್ನು ಬಂಧಿಸಲಾಗಿದೆ. ಅವರು ಕಳೆದ ೧೫ ದಿನಗಳಿಂದ ಈ ಗ್ರಾಮದ ತೋಟದ ಮನೆಯಲ್ಲಿ ಅಡಗಿಕೊಂಡಿದ್ದರು. ಭೂಪೇಂದ್ರ ಸಿಂಗ್ ಅವರ ವಿಚಾರಣೆ ಈಗಷ್ಟೇ ಪ್ರಾರಂಭವಾಗಿದೆ. ಆದ್ದರಿಂದ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಎಲ್ಲಿ ಅಡಗಿದ್ದರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ಇವ್ರನ್ನು ಬಂಧಿಸಿದಾಗ ಅವರು ಫಾರ್ಮ್ ಹೌಸ್ ನಲ್ಲಿ ಒಬ್ಬರೇ ಇದ್ದರು ಎಂದು ಸಿಐಡಿ ಐಜಿ ಪರೀಕ್ಷಿತಾ ರಾಥೋಡ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj