ರೋಗಿಗಳನ್ನು ಹೊರಹಾಕಿ ಕ್ರೌರ್ಯ; ಆಸ್ಪತ್ರೆಗೆ ಬೆಂಕಿ ಕೊಟ್ಟ ಇಸ್ರೇಲ್ - Mahanayaka

ರೋಗಿಗಳನ್ನು ಹೊರಹಾಕಿ ಕ್ರೌರ್ಯ; ಆಸ್ಪತ್ರೆಗೆ ಬೆಂಕಿ ಕೊಟ್ಟ ಇಸ್ರೇಲ್

30/12/2024

ಮಾರಕ ಕಾಯಿಲೆ ಇದ್ದ ರೋಗಿಗಳನ್ನು ಹೊರಹಾಕಿ ಗಾಝಾದ ಅದ್ವಾನ್ ಆಸ್ಪತ್ರೆಗೆ ಬೆಂಕಿ ಕೊಟ್ಟ ಇಸ್ರೇಲ್ ಕ್ರೌರ್ಯದ ಒಂದೊಂದೇ ಮಾಹಿತಿಗಳು ಹೊರ ಬೀಳುತ್ತಿವೆ. ಕಾಯಿಲೆ ಪೀಡಿತರನ್ನು ಉಪಚರಿಸುತ್ತಿದ್ದ ನರ್ಸ್ ಗಳಿಗೆ ಇಸ್ರೇಲಿ ಸೈನಿಕರು ಲೈಂಗಿಕ ಕಿರುಕುಳ ನೀಡಿರುವುದಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯಾದ ಯುರೋ ಮೆಡ್ ಮಾನಿಟರ್ ವರದಿ ಮಾಡಿದೆ. ಹಾಗೆಯೇ ವೈದ್ಯರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಇವರೆದುರೆ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿದ್ದು, ಆಸ್ಪತ್ರೆಯ ಡೈರೆಕ್ಟರ್ ಡಾಕ್ಟರ್ ಹುಸ್ಸಾಮ್ ಅಬೂ ಸಾಫಿಯ ಸಹಿತ ಹಲವರನ್ನು ಅಪಹರಿಸಿಕೊಂಡು ಹೋಗಲಾಗಿದ್ದು ಅವರ ಎಲ್ಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಿಲ್ಲ ಎನ್ನಲಾಗಿದೆ.

ಮಹಿಳೆಯರ ಬಟ್ಟೆಯನ್ನು ಹರಿದೆ ಸೆಯಲಾಗಿದೆ. ಅಲ್ಲದೆ ಅವರ ದೇಹದ ಮೇಲೆ ಬಲವಂತವಾಗಿ ಸ್ಪರ್ಶಿಸಲಾಗಿದೆ ಎಂದು ವರದಿ ತಿಳಿಸಿದೆ. ಉತ್ತರ ಗಾಝಾದಲ್ಲಿ ಚಟುವಟಿಕೆಯಲ್ಲಿರುವ ಏಕೈಕ ಆಸ್ಪತ್ರೆ ಇದಾಗಿತ್ತು ಮತ್ತು ಈ ಆಸ್ಪತ್ರೆಯನ್ನು ಇದೀಗ ಇಸ್ರೇಲ್ ಸೇನೆ ಬೆಂಕಿ ಇಟ್ಟು ನಾಶಪಡಿಸಿದೆ.

ಓರ್ವ ಮಹಿಳಾ ದಾದಿಯ ಬಟ್ಟೆಯನ್ನು ಇಸ್ರೇಲ್ ಯೋಧ ಬಲವಂತವಾಗಿ ಕಳಚಿ ಹಾಕಿದ ಅವರ ದೇಹದ ಭಾಗವನ್ನು ಸ್ಪರ್ಶಿಸಲು ಯತ್ನಿಸಿದ. ಆಗ ಅವರು ತಡೆದರು. ಇದರಿಂದ ಕುಪಿತನಾದ ಆತ ಆಕೆಯ ಮುಖಕ್ಕೆ ಹೊಡೆದ. ಇದರಿಂದ ರಕ್ತ ಬಂತು ಎಂದು ಘಟನೆಗೆ ಸಾಕ್ಷಿ ವಹಿಸಿದ ಮಹಿಳೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಇವರಲ್ಲದೆ ಇನ್ನೂ ಕೆಲವು ಮಹಿಳಾ ನರ್ಸ್ ಗಳ ಬಟ್ಟೆಯನ್ನು ಕಳಚಿ ಹಾಕಲಾಗಿದೆ ಎಂದು ಕೂಡ ತಿಳಿದು ಬಂದಿದೆ.
ಭೀತಿಯಿಂದ ನಲುಗುತ್ತಿದ್ದ ಮಗು ಸಹಿತ ಹಲವರನ್ನು ಇಸ್ರೇಲ್ ಸೇನೆ ಆಸ್ಪತ್ರೆಯಲ್ಲಿ ಗುಂಡಿಕ್ಕಿ ಕೊಂದಿದೆ ಎಂದು ಪ್ಯಾರಾಮೆಡಿಕಲ್ ಸ್ಟಾಫ್ ಮಾಧ್ಯಮದೊಂದಿಗೆ ಹೇಳಿದ್ದಾರೆ. ನಮ್ಮ ಗುಂಪಿನಲ್ಲಿದ್ದ ಐದು ಮಂದಿ ಗಾಯಗೊಂಡವರನ್ನು ಯುದ್ಧ ಟ್ಯಾಂಕರ್ ನ ಮುಂದೆ ನಡೆದು ಹೋಗುವಂತೆ ಸೇನೆ ಹೇಳಿತು ಮತ್ತು ಅವರನ್ನು ಗುಂಡಿಕ್ಕಿಕೊಲ್ಲಲಾಯಿತು ಎಂದು ಅವರು ಸಾಕ್ಷಿ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ