ಡಿ.ಕೆ.ಶಿವಕುಮಾರ್ ಬೆಂಬಲಿಗರ ವಾಹನಕ್ಕೆ ಕಲ್ಲುತೂರಾಟ ನಡೆಸಿದ ರಮೇಶ್ ಬೆಂಬಲಿಗರು - Mahanayaka

ಡಿ.ಕೆ.ಶಿವಕುಮಾರ್ ಬೆಂಬಲಿಗರ ವಾಹನಕ್ಕೆ ಕಲ್ಲುತೂರಾಟ ನಡೆಸಿದ ರಮೇಶ್ ಬೆಂಬಲಿಗರು

dk shivakumar
28/03/2021

ಬೆಳಗಾವಿ:  ಇಂದು ಬೆಳಗಾವಿ ಪ್ರವಾಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಅವರ ಬೆಂಬಲಿಗರ ವಾಹನಗಳ ಮೇಲೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಶಿವಕುಮಾರ್ ಆಗಮನದ ಸುದ್ದಿ ತಿಳಿದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ರಮೇಶ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿಮಾನ ನಿಲ್ದಾಣದಿಂದ ಡಿ.ಕೆ.ಶಿವಕುಮಾರ್ ಬೆಂಬಲಿಗರ ಜೊತೆಗೆ  ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಾಹನ ತಡೆಯಲು  ರಮೇಶ್ ಬೆಂಬಲಿಗರು ಯತ್ನಿಸಿದ್ದು, ಈ ವೇಳೆ ಪೊಲೀಸರು ತಡೆದಾಗ ಡಿ.ಕೆ.ಶಿವಕುಮಾರ್ ಬೆಂಬಲಿಗರ ವಾಹನಕ್ಕೆ ಚಪ್ಪಲಿ, ಕಲ್ಲುತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ತಮ್ಮ ಕಾನೂನು ಬಾಹಿರ ಕೃತ್ಯವನ್ನು ತಡೆದಿರುವುದಕ್ಕೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಪೊಲೀಸರ ವಿರುದ್ಧವೇ ಗರಂ ಆಗಿದ್ದಾರೆ.

ಬಿಜೆಪಿ ಶಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿದ ರೈತರು | ಕಾರಣ ಏನು ಗೊತ್ತಾ?

ಇತ್ತೀಚಿನ ಸುದ್ದಿ