ಇಸ್ರೇಲ್ ವಿರುದ್ಧ ಫೋರ್ಡ್ ನಿಂದ ಪೋಸ್ಟ್: ಫೆಲೆಸ್ತೀನನ್ನು ಬೆಂಬಲಿಸಲು ಕರೆ - Mahanayaka
4:09 PM Wednesday 5 - February 2025

ಇಸ್ರೇಲ್ ವಿರುದ್ಧ ಫೋರ್ಡ್ ನಿಂದ ಪೋಸ್ಟ್: ಫೆಲೆಸ್ತೀನನ್ನು ಬೆಂಬಲಿಸಲು ಕರೆ

31/12/2024

ಪ್ರಸಿದ್ಧ ಆಟೋಮೊಬೈಲ್ ಕಂಪನಿಯಾದ ಫೋರ್ಡ್ ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಸ್ರೇಲ್ ವಿರುದ್ಧ ಪೋಸ್ಟ್ ಗಳು ಕಾಣಿಸಿಕೊಂಡಿವೆ. ಇಸ್ರೇಲನ್ನು ಖಂಡಿಸಿ ಮತ್ತು ಫೆಲೆಸ್ತೀನನ್ನು ಬೆಂಬಲಿಸುವ ಹಲವು ಪೋಸ್ಟುಗಳು ಈ ಖಾತೆಯಲ್ಲಿ ಪ್ರಕಟವಾಗಿವೆ. ಇಸ್ರೇಲ್ ಭಯೋತ್ಪಾದಕ ರಾಷ್ಟ್ರವಾಗಿದ್ದು ಅದರ ಕೈಯಿಂದ ಫೆಲೆಸ್ತೀನನ್ನು ವಿಮೋಚಿಸಬೇಕಾಗಿದೆ ಎಂದು ಕರೆ ಕೊಡಲಾಗಿದೆ. ಈ ಕುರಿತಂತೆ ಸಾಕಷ್ಟು ಚರ್ಚೆಗಳಾದ ಬೆನ್ನಿಗೆ ಎಕ್ಸ್ ಖಾತೆಯಿಂದ ಈ ಪೋಸ್ಟುಗಳನ್ನು ಡಿಲೀಟ್ ಮಾಡಲಾಗಿದೆ ಮತ್ತು ತಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಫೋರ್ಡ್ ಕಂಪನಿ ಸ್ಪಷ್ಟೀಕರಣ ನೀಡಿದೆ.

ಈ ಮೊದಲು ಫೋರ್ಡ್ ಕಂಪನಿಯ ಸ್ಥಾಪಕರಾದ ಹೆನ್ರಿ ಫೋರ್ಡ್ ಅವರು ಯೆಹೂದಿಯರನ್ನು ವಿಮರ್ಶಿಸಿದ್ದರು ಮತ್ತು ಆ ಕಾರಣಕ್ಕಾಗಿ ಅವರು ಯಹೂದಿ ವಿರೋಧಿ ಎಂಬ ಪ್ರಚಾರವು ನಡೆದಿತ್ತು. ಎಲ್ಲಾ ಕೆಡುಕು ಗಳಿಗೂ ಯಹೂದಿಗಳು ಮತ್ತು ಯಹೂದಿ ಮಾಲಕರು ಕಾರಣ ಎಂದು ಅವರು ಈ ಮೊದಲು ಹೇಳಿದ್ದರು. ಯುದ್ಧಗಳನ್ನು ಸೃಷ್ಟಿಸಿದ್ದು ಅವರೇ, ಅಮೆರಿಕಾದ ಲೂಟಿಯ ಹಿಂದೆ ಇರುವುದೂ ಅವರೇ ಎಂದವರು ಹೇಳಿದ್ದರು.

ಇದೇ ವೇಳೆ ಇಸ್ರೇಲ್ ಸೇನೆಗೆ ಫೋರ್ಡ್ ತನ್ನ ವಾಹನಗಳನ್ನು ಮಾರುತ್ತಿರುವುದೂ ನಡೆಯುತ್ತಿದೆ. 2001ರಲ್ಲಿ ಇಸ್ರೇಲ್ ಜೊತೆಗೆ ಈ ಕಂಪನಿ ಮೊಟ್ಟಮೊದಲ ಬಾರಿ ಒಪ್ಪಂದಕ್ಕೆ ಸಹಿ ಹಾಕಿತು. 40 ಮಿಲಿಯನ್ ಡಾಲರ್ ನ 1000 ಎಫ್ 350 ಪಿಕಪ್ ಟ್ರಕ್ ಗಳನ್ನು ಅದು ಮೊದಲ ಹಂತವಾಗಿ ಇಸ್ರೇಲ್ ಗೆ ರವಾನಿಸಿತು. ಗಾಝಾದ ಮೇಲಿನ ದಾಳಿಗೆ ಫೋರ್ಡ್ ಕಂಪನಿಯ ವಾಹನಗಳನ್ನು ಬಳಸಲಾಗುತ್ತಿದೆ ಎಂಬ ಅಭಿಪ್ರಾಯವೂ ಇದೆ. ಒಂದೇ ಸಮಯದಲ್ಲಿ ಇಸ್ರೇಲ್ ಸೇನೆಗೆ ನೆರವಾಗುವುದು ಮತ್ತು ಗಾಝಾದಲ್ಲಿ ಸಂತ್ರಸ್ತರಾದ ಜನರಿಗೂ ನೆರವಾಗುವುದನ್ನೂ ಫೋರ್ಡ್ ಕಂಪನಿ ಮಾಡುತ್ತಿದೆ ಎಂದೂ ವರದಿ ಇದೆ.

2023 ಸೆಪ್ಟೆಂಬರ್ ಏಳರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಫೋರ್ಡ್ ಉದ್ಯೋಗಿಗಳ ಸಂಘಟನೆಯಾದ ಫೋರ್ಡ್ ಫೌಂಡೇಶನ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅದೇ ವೇಳೆ ಗಾಝಾದಲ್ಲಿ ಜನರು ಪಡುತ್ತಿರುವ ಪಾಡನ್ನು ನೋಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರಿಗೆ ಸಹಾಯ ಮಾಡಬೇಕು ಎಂದು ಇದೇ ಉದ್ಯೋಗಿಗಳ ಸಂಘಟನೆ ಫೋರ್ಡ್ ಕಂಪನಿಯ ಅಧ್ಯಕ್ಷ ಬ್ಯಾರನ್ ವಾಕರ್ ಗೆ ಮನವಿ ಮಾಡಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ