ಹಿಂದೂ ಆಚಾರಗಳಿಗೂ ಹೊಸ ವರ್ಷ ಆಚರಣೆಗೂ ಸಂಬಂಧ ಇಲ್ಲ: ಬಿಜೆಪಿ ನಾಯಕನ ವಾದ
ಹೊಸ ವರ್ಷಾಚರಣೆಯಿಂದ ಹಿಂದೂಗಳು ದೂರ ನಿಲ್ಲಬೇಕು. ಹಿಂದೂ ಆಚಾರಗಳಿಗೂ ಹೊಸ ವರ್ಷ ಆಚರಣೆಗೂ ಸಂಬಂಧ ಇಲ್ಲ, ಆದ್ದರಿಂದ, ಹಿಂದುಗಳು ಹೊಸ ವರ್ಷಾಚರಣೆಯಿಂದ ದೂರ ನಿಲ್ಲಬೇಕು ಎಂದು ತೆಲಂಗಾಣದ ಬಿಜೆಪಿ ನಾಯಕ ಮತ್ತು ಶಾಸಕ ಟಿ ರಾಜ ಸಿಂಗ್ ಕರೆ ಕೊಟ್ಟಿದ್ದಾರೆ.
ಇದು ಪಾಶ್ಚಾತ್ಯ ರಾಷ್ಟ್ರಗಳು ಮಾಡಿರುವ ದೊಡ್ಡ ಷಡ್ಯಂತ್ರವಾಗಿದೆ. ನಾವು ಆ ಷಡ್ಯಂತ್ರದ ಬಲೆಗೆ ಬಿದ್ದಿದ್ದೇವೆ ಮತ್ತು ಮುಂದಿನ ತಲೆಮಾರಿಗೆ ಇದನ್ನು ವರ್ಗಾಯಿಸುತ್ತಿದ್ದೇವೆ. ಪ್ರತಿ ವರ್ಷ ಯುವಕರು ಹೊಸ ವರ್ಷವನ್ನು ಸ್ವಾಗತಿಸುವುದಕ್ಕಾಗಿ ಪಬ್ಬುಗಳಿಗೂ ಬಾರ್ ಗಳಿಗೂ ರೆಸಾರ್ಟ್ ಗಳಿಗೂ ಹೋಗುವುದನ್ನು ನಾನು ನೋಡುತ್ತಿದ್ದೇನೆ ಎಂದು ರಾಜ ಸಿಂಗ್ ಹೇಳಿದ್ದಾರೆ.
ಜನವರಿ 1 ಇಂಗ್ಲಿಷರ ಹೊಸ ವರ್ಷವಾಗಿದೆ.
ಸನಾತನಿಗಳದ್ದು ಅಲ್ಲ. ಇತರ ಸಮುದಾಯಗಳ ಹೊಸ ವರ್ಷವನ್ನು ನಾವು ಯಾಕೆ ಸ್ವಾಗತಿಸುತ್ತೇವೆ ಅನ್ನೋದು ಗೊತ್ತಾಗುತ್ತಿಲ್ಲ. ಯುಗಾದಿ ಉತ್ಸವ ಚೈತ್ರ ಶುಕ್ಲ ಪ್ರತಿಪಾದ ಮುಂತಾದವು ನಮ್ಮ ಹೊಸ ವರ್ಷದ ಆರಂಭವಾಗಿದೆ ಎಂದು ರಾಜಾಸಿಂಗ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj