ವಿದ್ಯಾರ್ಥಿನಿಯ ಅತ್ಯಾಚಾರ ಹಿನ್ನೆಲೆ: ಆರೋಪಿ ಶಿಕ್ಷಕನಿಗೆ ಜೈಲು ಶಿಕ್ಷೆ ಪ್ರಕಟ
ಟ್ಯೂಷನ್ ಟೀಚರ್ ಗೆ ಕೇರಳದ ತ್ವರಿತಗತಿ ನ್ಯಾಯಾಲಯವು 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನ ವಿಧಿಸಿದೆ ಪ್ಲಸ್ ವನ್ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಅಪರಾಧಕ್ಕಾಗಿ ಈ ಶಿಕ್ಷೆಯನ್ನ ವಿಧಿಸಿದೆ. ಮಾತ್ರ ಅಲ್ಲ ಒಂದೂವರೇ ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಸರಕಾರಿ ಉದ್ಯೋಗಿಯಾಗಿರುವ ಆರೋಪಿ ಮನೋಜ್ ತನ್ನ ಮನೆಯಲ್ಲಿ ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ. ಆತ ವಿದ್ಯಾರ್ಥಿನಿಗೆ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ಮನೆಗೆ ಕರೆಸಿಕೊಂಡಿದ್ದ ಮತ್ತು ಆಕೆಯ ಲೈಂಗಿಕ ಕಿರುಕುಳದ ಫೋಟೋವನ್ನು ತನ್ನ ಮೊಬೈಲಲ್ಲಿ ಕ್ಲಿಕಿಸಿದ್ದ. ಇದರಿಂದ ಬೆದರಿದ ವಿದ್ಯಾರ್ಥಿನಿ ಟ್ಯೂಷನ್ ಗೆ ಬರುವುದನ್ನು ನಿಲ್ಲಿಸಿದ್ದಳು.
ಘಟನೆಯ ಬಗ್ಗೆ ತಿಳಿದ ವಿದ್ಯಾರ್ಥಿನಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆತನ ಮೊಬೈಲ್ ಅನ್ನು ಪಡೆದುಕೊಂಡು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು ಮತ್ತು ಆತ ಕ್ಲಿಕ್ಕಿಸಿದ ಫೋಟೋಗಳನ್ನು ಪರೀಕ್ಷೆಯಲ್ಲಿ ಪತ್ತೆಹಚ್ಚಲಾಗಿತ್ತು. ಇದೇ ವೇಳೆ ಈತನ ಕೃತ್ಯಯನ್ನು ತಿಳಿದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj