ದೇಶದಲ್ಲಿ ಧರ್ಮದ್ವೇಷ ಹೆಚ್ಚಳ: 2024ರಲ್ಲಿ 59 ಕೋಮು ಗಲಭೆಗಳು ನಡೆದಿದೆ ಎಂದ ತನಿಖಾ ವರದಿ
2024ರಲ್ಲಿ ಏನೇನು ನಡೆದಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಅವಲೋಕನದ ವರದಿಗಳು ಪ್ರಕಟವಾಗುತ್ತಿವೆ. ಇದೇ ವೇಳೆ 2024ರಲ್ಲಿ 59 ಕೋಮು ಗಲಭೆಗಳು ನಡೆದಿರುವುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಆದರೆ 2023 ರಲ್ಲಿ 32 ಕೋಮುಗಲಭೆಗಳು ನಡೆದಿತ್ತು. ಮಹಾರಾಷ್ಟ್ರದಲ್ಲಿ 12 ಕೋಮುಗಲಭೆಗಳು ನಡೆದಿದ್ದು ಉತ್ತರ ಪ್ರದೇಶ ಬಿಹಾರಗಳಲ್ಲಿ ತಲಾ ಏಳು ಕೋಮುಗಲಭೆಗಳು ನಡೆದಿವೆ.
ವಿಶೇಷ ಎಂದರೆ ದೇಶದ ಹೃದಯ ಭಾಗ ಎಂದು ಗುರುತಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋಮುಗಳಭೆಗಳಾಗಿರುವುದು ವಿಸ್ಮಯಕಾರಿ ಎಂದು ವರದಿಯನ್ನು ಸಿದ್ಧಪಡಿಸಿರುವ ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಂನ ಮುಖ್ಯಸ್ಥರಾದ ಡಾಕ್ಟರ್ ಇರ್ಫಾನ್ ಇಂಜಿನಿಯರ್ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದ್ದು ಮುಖ್ಯವಾಗಿ ಇಂಡಿಯನ್ ಎಕ್ಸ್ಪ್ರೆಸ್ ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ಸಹಫಾತ್ ಮತ್ತು ಇಂಕಿ ಲಾಬ್ ಮಾಧ್ಯಮಗಳ ಸುದ್ದಿಗಳನ್ನ ಆಧಾರವಾಗಿ ಪರಿಗಣಿಸಲಾಗಿದೆ.
ಕೋಮುಗಲಭೆಯಲ್ಲಿ ಒಟ್ಟು 13 ಮಂದಿ ಸಾವಿಗೀಡಾಗಿದ್ದು ಇವರಲ್ಲಿ 10 ಮಂದಿ ಮುಸ್ಲಿಮರಾದರೆ ಮೂವರು ಹಿಂದುಗಳು ಎಂದು ವರದಿ ತಿಳಿಸಿದೆ. ಹೆಚ್ಚಿನ ಕೋಮುಗಲಬೆಗಳು ಧಾರ್ಮಿಕ ಹಬ್ಬಗಳು ಅಥವಾ ಮೆರವಣಿಗೆಯ ವೇಳೆ ಘಟಿಸಿದೆ. ಮುಖ್ಯವಾಗಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾನ ಸಮಯದಲ್ಲಿ ನಾಲ್ಕು ಕೋಮುಗಲಭೆಗಳು ನಡೆದಿದ್ದರೆ ಸರಸ್ವತಿ ಪೂಜೆಯ ಸಮಯದಲ್ಲಿ ಏಳು ಕೋಮುಗಲಭೆಗಳು ಗಣೇಶ ಹಬ್ಬದ ಸಮಯದಲ್ಲಿ ನಾಲ್ಕು ಕೋಮು ಗಲಭೆಗಳು ಮತ್ತು ಈ ದ್ ನ ಸಂದರ್ಭದಲ್ಲಿ ಎರಡು ಕೋಮುಗಲಭೆಗಳು ನಡೆದಿವೆ ಎಂದು ವರದಿ ತಿಳಿಸಿದೆ.
2024ರಲ್ಲಿ 12 ಗುಂಪು ಥಳಿತ ಪ್ರಕರಣಗಳು ನಡೆದಿದ್ದು ಇದರಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಈ ಹತ್ತು ಮಂದಿಯಲ್ಲಿ ಎಂಟು ಮಂದಿ ಮುಸ್ಲಿಮರಾದರೆ ಒಬ್ಬರು ಹಿಂದು ಮತ್ತು ಒಬ್ಬರು ಕ್ರೈಸ್ತರಾಗಿದ್ದಾರೆ. 2023ರಲ್ಲಿ 21 ಮಂದಿ ಗುಂಪು ಥಳಿತದಿಂದಾಗಿ ಹತ್ಯೆಗೀಡಾಗಿದ್ದರು.
ಮಹಾರಾಷ್ಟ್ರದಲ್ಲಿ ಗುಂಪು ಥಳಿತದ ಮೂರು ಪ್ರಕರಣಗಳು ನಡೆದಿವೆ. ಛತ್ತಿಸ್ಗಢ ಗುಜರಾತ್ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ ಮತ್ತು ಕರ್ನಾಟಕದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಇದೇ ವೇಳೆ ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬುಲ್ಡೋಜರ್ ಪ್ರಕರಣಗಳು ನಡೆದಿದ್ದು ಇದರಲ್ಲಿ ಬಹುತೇಕ ಸಂತ್ರಸ್ತರು ಮುಸ್ಲಿಮರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj