ಲೋನ್ ಆಪಲ್ಲಿ ನಾಲ್ಕುವರೆ ಸಾವಿರ ಲೋನ್ ತೆಗೆದ್ರು: ಬೆದರಿಸಿ 2 ಲಕ್ಷ ಕಬಳಿಸಿದ ವಂಚಕರು - Mahanayaka

ಲೋನ್ ಆಪಲ್ಲಿ ನಾಲ್ಕುವರೆ ಸಾವಿರ ಲೋನ್ ತೆಗೆದ್ರು: ಬೆದರಿಸಿ 2 ಲಕ್ಷ ಕಬಳಿಸಿದ ವಂಚಕರು

02/01/2025

ಲೋನ್ ಆಪ್ ಮೂಲಕ 4,500 ರೂಪಾಯಿಯನ್ನು ಸಾಲವಾಗಿ ಪಡೆದ 46 ವರ್ಷದ ಅಧ್ಯಾಪಕನೋರ್ವ ಆ ಬಳಿಕ ಎರಡು ಲಕ್ಷದ ಹದಿನೆಂಟು ಸಾವಿರ ರೂಪಾಯಿಯನ್ನು ಕಳಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆಪ್ ಮೂಲಕ ಪಡೆದ ಲೋನನ್ನು ಹಿಂತಿರುಗಿಸಿದ್ದರೂ ಆತನ ಫೋಟೋವನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಈ ಹಣವನ್ನು ಅಧ್ಯಾಪಕನಿಂದ ಲೂಟಿ ಮಾಡಲಾಗಿದೆ.
ಈ ಅಧ್ಯಾಪಕರ ವಾಟ್ಸಾಪ್ ಫೇಸ್ ಬುಕ್ ಇಮೇಲ್, ಸಂಪರ್ಕಗಳು ಮತ್ತು ಗ್ಯಾಲರಿ ಇತ್ಯಾದಿ ಎಲ್ಲೆಡೆಗೂ ಈ ವಂಚಕರು ನುಗ್ಗಿದ್ದಾರೆ.

ಕಳೆದ ವರ್ಷ ಫೇಸ್ಬುಕ್ ನಲ್ಲಿ ಒಂದು ಜಾಹೀರಾತನ್ನು ನೋಡಿದೆ. ಬಳಿಕ ಲಿಂಕ್ ಗೆ ಕ್ಲಿಕ್ ಮಾಡಿದೆ. ಆಗ ಒಂದು ಲೋನ್ ಆಪ್ ಡೌನ್ಲೋಡ್ ಆಯ್ತು ಮತ್ತು 4500 ರೂಪಾಯಿ ನನ್ನ ಅಕೌಂಟಿಗೆ ಕ್ರೆಡಿಟ್ ಆಯ್ತು. ಬಳಿಕ ಸಾಲವನ್ನು ಹಿಂತಿರುಗಿಸುವಂತೆ ಆಗ್ರಹಿಸಿ ಫೋನ್ ಕರೆಗಳು ಮತ್ತು ಮೆಸೇಜುಗಳು ಬರತೊಡಗಿದವು. ಬಳಿಕ ಇವರಿಂದ ಎರಡು ಲಕ್ಷದ 18 ಸಾವಿರ ರೂಪಾಯಿಯನ್ನು ವಂಚಕರು ಪಡೆದುಕೊಂಡರು. ನೀಡದಿದ್ದರೆ ಮೋರ್ಫ್ ಮಾಡಿದ ನಿಮ್ಮ ಫೋಟೋ ಮತ್ತು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿದ್ದರು ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ