ನಿಷೇಧ: ದುಬೈನಲ್ಲಿ ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಗುಡ್ ಬೈ - Mahanayaka

ನಿಷೇಧ: ದುಬೈನಲ್ಲಿ ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಗುಡ್ ಬೈ

02/01/2025

ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ದುಬೈ ಬೈ ಹೇಳಿದೆ. ಜನವರಿ ಒಂದರಿಂದ ಈ ನಿಯಮ ಜಾರಿಯಾಗಿದೆ. ಬಳಸಿ ಬಿಸಾಕುವ ಸ್ಟೈರೋಫೋಮ್ ಕಪ್ ಗಳು, ಪ್ಲಾಸ್ಟಿಕ್ ಕೋಟನ್ ಸ್ವಾಬ್ಸ್, ಪ್ಲಾಸ್ಟಿಕ್ ಟೇಬಲ್ ಕವರ್ ಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಸ್ಥೈರೋಫಾರ್ಮ್ ಆಹಾರ ಕಂಟೇನರ್ ಗಳು ಇತ್ಯಾದಿಗಳ ಮೇಲೆ ನಿಷೇಧ ಹೇರಲಾಗಿದೆ.

ದುಬೈಯ್ಯ ಉಪಪ್ರಧಾನಿ ಮತ್ತು ರಕ್ಷಣಾಮಂತ್ರಿಯಾಗಿರುವ ಶೇಕ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. 2026 ಜನವರಿ ಒಂದರಿಂದ ಪ್ಲಾಸ್ಟಿಕ್ ಪ್ಲೇಟ್ ಗಳು, ಫುಡ್ ಕಂಟೇನರ್ ಗಳು, ಟೇಬಲ್ ವೇರ್, ನೀರಿನ ಕಪ್ಪುಗಳು ಮತ್ತು ಅವುಗಳ ಪ್ಲಾಸ್ಟಿಕ್ ಮುಚ್ಚಳಗಳು ಸಹಿತ ಎಲ್ಲವನ್ನೂ ದುಬೈ ನಿಷೇಧಿಸಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ