ಹೋಳಿ ಆಡಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಸಾವು | ಓರ್ವನ ಸ್ಥಿತಿ ಗಂಭೀರ - Mahanayaka
12:06 AM Thursday 12 - December 2024

ಹೋಳಿ ಆಡಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಸಾವು | ಓರ್ವನ ಸ್ಥಿತಿ ಗಂಭೀರ

haveri holi
28/03/2021

ಹಾವೇರಿ: ಹೋಳಿಯಾಡಿ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲೆಯ ನಾಗನೂರ ಗ್ರಾಮದಲ್ಲಿ ನಡೆದಿದ್ದು,  ಇಬ್ಬರು ಬಾಲಕರು ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾಗಿದೆ.

ಮಹೇಶ ಮುರುಡಣ್ಣನವರ ಮತ್ತು ವೀರೇಶ್ ಅಕ್ಕಿವಳ್ಳಿ ಮೃತಪಟ್ಟ ಬಾಲಕರಾಗಿದ್ದು, ಈ ಇಬ್ಬರು ಬಾಲಕರು ಕೂಡ 10 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ. 7 ವರ್ಷದ ಯೋಗೀಶ ಎಂಬ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೋಳಿ ಆಡಿದ ಬಳಿಕ ವರದಾ ನದಿಗೆ ಬಾಲಕರು ಈಜಲು ತೆರಳಿದ್ದಾರೆ. ಈ ವೇಳೆ ಈ ದುರಂತ ಸಂಭವಿಸಿದೆ.  ಘಟನೆ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ