ಮೃತದೇಹ ಮನೆಗೆ ತರುತ್ತಿದ್ದ ವೇಳೆ  ಎದ್ದು ಕುಳಿತ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ! - Mahanayaka

ಮೃತದೇಹ ಮನೆಗೆ ತರುತ್ತಿದ್ದ ವೇಳೆ  ಎದ್ದು ಕುಳಿತ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ !

pandurang ulfe
03/01/2025

ಮಹಾರಾಷ್ಟ್ರ:  ಹೃದಯಾಘಾತದ ಹಿನ್ನೆಲೆ 65 ವರ್ಷ ವಯಸ್ಸಿನ ವೃದ್ಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿ ವ್ಯಕ್ತಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಹೀಗಾಗಿ ಸಂಬಂಧಿಕರು ಕಣ್ಣೀರು ಹಾಕುತ್ತಾ, ಮೃತದೇಹವನ್ನ ಆ್ಯಂಬುಲೆನ್ಸ್ ನಲ್ಲಿ ಮನೆಯತ್ತ ಸಾಗಿಸುತ್ತಿದ್ದಾಗಲೇ ಪವಾಡವೊಂದು ನಡೆದುಹೋಗಿದೆ.

ಪಾಂಡುರಂಗ್ ಉಲ್ಫೆ(65) ಕೊಲ್ಲಾಪುರ ಜಿಲ್ಲೆಯ ಕಸಾಬ—ಬವಾಡದವರಾಗಿದ್ದಾರೆ. ಡಿಸೆಂಬರ್ 16ರಂದು ಮುಂಜಾನೆ ಇವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಕುಟುಂಬಸ್ಥರು ಇವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ವ್ಯಕ್ತಿ ಸಾವನ್ನಪ್ಪಿರುವುದನ್ನು ಕೇಳಿ ಕುಟುಂಬಸ್ಥರು ರೋದಿಸಿದ್ದರು. ಕೊನೆಗೆ ಮನೆಗೆ ಮೃತದೇಹವನ್ನ ಆ್ಯಂಬುಲೆನ್ಸ್ ಮೂಲಕ ಸಾಗಿಸಲು ಮುಂದಾಗಿದ್ದಾರೆ.

ಆ್ಯಂಬುಲೆನ್ಸ್ ಉಲ್ಫೆಯ ಮನೆಯ ಕಡೆಗೆ ಚಲಿಸುತ್ತಿತ್ತು. ಈ ನಡುವೆ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ಕ್ರಾಸ್ ನ್ನು ಆ್ಯಂಬುಲೆನ್ಸ್ ದಾಟಿದ ವೇಳೆ ಆ್ಯಂಬುಲೆನ್ಸ್ ಎತ್ತರಕ್ಕೆ ಜಿಗಿದಿದೆ. ಈ ವೇಳೆ ಉಂಟಾದ ಘರ್ಷಣೆಯ ವೇಳೆ ಸತ್ತಿದ್ದ ವ್ಯಕ್ತಿ ಕಣ್ಣುಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಸದ್ಯ ಉಲ್ಫೆ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮನೆ ಕಡೆಗೆ ತೆರಳಿ ಮರು ಜೀವನ ಆರಂಭಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ