ಕೊನೆಗೂ ಮುಕ್ತಿ: ಯುಎಇಯಿಂದ ಭಾರತಕ್ಕೆ ಮರಳಿದ 3700 ಮಂದಿ ಭಾರತೀಯರು
ಕಾನೂನು ಬಾಹಿರವಾಗಿ ನೆಲೆಸಿರುವ 3700 ಭಾರತೀಯರು ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಕಾನೂನು ಬಾಹಿರವಾಗಿ ನೆಲೆಸಿದ್ದವರಿಗೆ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಯುಎಇ ಸಾರ್ವತ್ರಿಕ ಕ್ಷಮಾದಾನ ಘೋಷಿಸಿತ್ತು. ಇದನ್ನು ಅನುಸರಿಸಿ ಈ ವಾಪಸಾತಿ ನಡೆದಿದೆ.
ಇದೀಗ ಈ ಸಾರ್ವತ್ರಿಕ ಕ್ಷಮಾದಾನದ ಅವಧಿ ಮುಕ್ತಾಯಗೊಂಡಿದ್ದು ಕಾನೂನುಬಾಹಿರವಾಗಿ ಇನ್ನೂ ಉಳಿದುಕೊಂಡವರ ಮೇಲೆ ಪ್ರಕರಣ ದಾಖಲಾಗಲಿದೆ.
ದುಬೈ ಶಾರ್ಜಾ ಅಜ್ಮಾನ್, ಉಮ್ಮಲ್ ಖುವೈನ್, ರಾಸಲ್ ಖೈಮಾ, ಫುಜೈರಾ ಮುಂತಾದ ರಾಜ್ಯಗಳಲ್ಲಿ ಸಾರ್ವಜನಿಕ ಕ್ಷಮಾದಾನ ಸಿಕ್ಕವರ ಮಾಹಿತಿ ಇದಾಗಿದೆ. ಸುಮಾರು 15 ಸಾವಿರ ಭಾರತೀಯರು ಸಾರ್ವತ್ರಿಕ ಕ್ಷಮಾದಾನವನ್ನು ಅಪೇಕ್ಷಿಸಿ ದುಬೈ ಕಾನ್ಸ್ ಲೇಟ್ ಅನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ 3700 ಮಂದಿಗೆ ಭಾರತಕ್ಕೆ ಮರಳಲು ಎಗ್ಝಿಟ್ ಪಾಸ ನೀಡಲಾಗಿದೆ.
ಪಾಸ್ಪೋರ್ಟ್ ಕಳೆದು ಹೋಗಿರುವ 1117 ಮಂದಿಗೆ ಹೊಸ ಪಾಸ್ ಪೋರ್ಟ್ ಅನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 3586 ಮಂದಿಗೆ ತಾತ್ಕಾಲಿಕ ಪಾಸ್ಪೋರ್ಟ್ ಅನ್ನು ನೀಡಲಾಗಿದೆ. ಸಾಕಷ್ಟು ಮಂದಿಗೆ ಶುಲ್ಕದಲ್ಲಿ ರಿಯಾಯಿತಿ ದೊರೆತಿದೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj