32 ವರ್ಷಗಳಿಂದ ಸ್ನಾನ ಮಾಡದ ‘ಛೋಟಾ ಬಾಬಾ’ ಕುಂಭಮೇಳದ ಆಕರ್ಷಣೆ!
ಲಕ್ನೋ: ಕುಂಭ ಮೇಳಕ್ಕೆ ಉತ್ತರ ಪ್ರದೇಶ ಸಜ್ಜಾಗಿದೆ. ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು–ಸಂತರು ಕುಂಭ ಮೇಳದಲ್ಲಿ ಭಾಗಿಯಾಗಲಿದ್ದಾರೆ.
12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳಕ್ಕೆ ಈ ಬಾರಿ ಛೋಟಾ ಬಾಬಾ ಪ್ರಮುಖ ಆಕರ್ಷಣೀಯವಾಗಿದ್ದಾರೆ. ಇವರ ವಿಶೇಷತೆ ಏನಂದರೆ, ಇವರು ಕಳೆದ 32 ವರ್ಷಗಳಿಂದ ಸ್ನಾನವೇ ಮಾಡಿಲ್ಲ. 3 ಅಡಿ 8 ಇಂಚು ಎತ್ತರವಿರುವ ಇವರಿಗೆ 57 ವರ್ಷ ವಯಸ್ಸಾಗಿದೆ. ಗಂಗಾಪುರಿ ಮಹಾರಾಜ್ ಛೋಟಾ ಬಾಬಾ ಅವರು ಅಸ್ಸಾಂನ ಕಾಮಾಖ್ಯ ಪೀಠದವರಾಗಿದ್ದಾರೆ.
ಇನ್ನೂ ಕುಂಭಮೇಳದ ಬಗ್ಗೆ ಮಾತನಾಡಿರುವ ಛೋಟಾ ಬಾಬಾ, ಇದು ಮಿಲನ ಮೇಳ, ಆತ್ಮಕ್ಕೆ ಆತ್ಮದ ಸಂಪರ್ಕವಿರಬೇಕು. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ. ನನಗೆ ಇಲ್ಲಿಗೆ ಬರಲು ತುಂಬಾ ಸಂತೋಷವಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ನನಗೆ 32 ವರ್ಷಗಳಿಂದ ಈಡೇರದ ಬಯಕೆಗಳಿವೆ. ಹಾಗಾಗಿ ನಾನು ಸ್ನಾನ ಮಾಡುವುದಿಲ್ಲ, ಗಂಗಾಸ್ನಾನ ಮಾಡುವುದಿಲ್ಲ ಎಂದು ಬಾಬಾ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7