ಶಾಕ್: ಪಾನಿಪೂರಿ ಅಂದ್ರೆ ಸಾಮಾನ್ಯವಲ್ಲ; ವರ್ಷದಲ್ಲಿ 40 ಲಕ್ಷ ಸಂಪಾದಿಸಿದ ವ್ಯಕ್ತಿಗೆ ಜಿಎಸ್ ಟಿ ನೋಟೀಸ್! - Mahanayaka
1:16 PM Wednesday 5 - February 2025

ಶಾಕ್: ಪಾನಿಪೂರಿ ಅಂದ್ರೆ ಸಾಮಾನ್ಯವಲ್ಲ; ವರ್ಷದಲ್ಲಿ 40 ಲಕ್ಷ ಸಂಪಾದಿಸಿದ ವ್ಯಕ್ತಿಗೆ ಜಿಎಸ್ ಟಿ ನೋಟೀಸ್!

04/01/2025

ಪಾನಿಪೂರಿ ಮಾರಾಟಗಾರನ ಆದಾಯವನ್ನು ಕೇಳಿ ಸೋಶಿಯಲ್ ಮೀಡಿಯಾ ಬೆಚ್ಚಿಬಿದ್ದಿದೆ. ಪಾನಿಪೂರಿ ಮಾರಾಟಕ್ಕೆ ಆನ್ಲೈನ್ ಪೇಮೆಂಟ್ ಮೂಲಕ 40 ಲಕ್ಷ ರೂಪಾಯಿಯನ್ನು ಈ ತಮಿಳುನಾಡಿನ ಪಾನಿಪೂರಿ ಮಾರಾಟಗಾರ ಪಡೆದಿದ್ದಾರೆ. ಇಷ್ಟು ಭಾರಿ ಸಂಖ್ಯೆಯ ಆನ್ಲೈನ್ ವ್ಯವಹಾರ ಮಾಡಿರುವುದಕ್ಕಾಗಿ ಇದೀಗ ಈ ವ್ಯಕ್ತಿಗೆ ಜಿಎಸ್‌ಟಿ ನೋಟಿಸು ಬಂದಿದೆ.

ಜಿಎಸ್‌ಟಿ ನೋಟಿಸ್ ನ ಪ್ರಕಾರ 2023- 24ರ ವರ್ಷದಲ್ಲಿ ಈ ವ್ಯಕ್ತಿ 40 ಲಕ್ಷ ರೂಪಾಯಿಯನ್ನು ಸಂಪಾದಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ವ್ಯಕ್ತಿಯ ವರಮಾನ ಕೂಡ ಈ ನೋಟಿಸ್ ನಲ್ಲಿ ವ್ಯಕ್ತವಾಗಿದೆ. ಯುಪಿಐ ಐಡಿಯನ್ನು ಬಳಸಿ ಈ ವ್ಯಕ್ತಿಯ ಅಕೌಂಟಿಗೆ ಹಾಕಲಾದ ಹಣದ ಆಧಾರದಲ್ಲಿ ಈ ವರಮಾನವನ್ನು ಲೆಕ್ಕ ಹಾಕಲಾಗಿದೆ.

ಇದೇ ವೇಳೆ ನಾವು ನಮ್ಮ ಉದ್ಯೋಗವನ್ನು ತ್ಯಜಿಸಿ ಪಾನಿಪುರಿ ಅಂಗಡಿ ಹಾಕಿದರೆ ಹೇಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಟೆಕ್ಕಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೆಡಿಕಲ್ ಕಾಲೇಜಿನ ಪ್ರೊಫೆಸರ್ಗಿಂತ ಹೆಚ್ಚು ಆದಾಯವನ್ನು ಒಂದು ವರ್ಷದಲ್ಲಿ ಈ ವ್ಯಕ್ತಿ ಸಂಪಾದಿಸಿದ್ದಾರೆ ಎಂದು ಕೂಡ ಅಭಿಪ್ರಾಯ ವ್ಯಕ್ತವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ