ಕತಾರ್ ನಲ್ಲಿ ಗಾಝಾ ಕದನ ವಿರಾಮ ಚರ್ಚೆ: 24 ಗಂಟೆಗಳಲ್ಲಿ 77 ಮಂದಿಯನ್ನು ಕೊಂದ ಇಸ್ರೇಲ್
ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವ ಬಗ್ಗೆ ಕತಾರ್ ನಲ್ಲಿ ಚರ್ಚೆ ನಡೆಯುತ್ತಿರುವಂತೆಯೇ ಕಳೆದ 24 ಗಂಟೆಗಳಲ್ಲಿ 77 ಮಂದಿಯನ್ನು ಇಸ್ರೇಲ್ ಕೊಂದು ಹಾಕಿದೆ. ಕೇಂದ್ರ ಗಾಝಾದ ನುಸೈರಾತ್, ಸುವೈದ, ಮಗಾಸಿ ಮತ್ತು ದೇರ್ ಅಲ್ ಬಲಾಹ್ ಮುಂತಾದ ಕಡೆಗಳಲ್ಲಿ ಇಸ್ರೇಲಿ ಸೇನೆ ಉಗ್ರವಾಗಿ ಎರಗಿ ಮಹಿಳೆಯರು ಮತ್ತು ಮಕ್ಕಳು ಸಹಿತ ಭಾರಿ ಸಂಖ್ಯೆಯಲ್ಲಿ ಪ್ರಾಣಹಾನಿಗೆ ಕಾರಣವಾಗಿದೆ.
ಸುರಕ್ಷಿತ ಸ್ಥಳ ಎಂದು ಇಸ್ರೇಲ್ ಸ್ವತಃ ಘೋಷಿಸಿದ ಮವಾಸಿ ಪ್ರದೇಶದ ಮೇಲೆಯೇ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಈ ನಡುವೆ ಇಸ್ರೇಲನ್ನು ಗುರಿಯಾಗಿಸಿ ಹೂತಿಗಳು ಮಿಸೈಲ್ ದಾಳಿ ಪ್ರಾರಂಭಿಸಿದ್ದಾರೆ. ಇದೇ ವೇಳೆ ಕದನ ವಿರಾಮ ವಿಷಯದಲ್ಲಿ ಚರ್ಚೆ ನಡೆಸುವುದಕ್ಕಾಗಿ ಇಸ್ರೇಲ್ ಗುಪ್ತಚರ ಸಂಸ್ಥೆಯಾದ ಮೊಸಾದ್, ರಕ್ಷಣಾ ಸಚಿವರ ಪ್ರತಿನಿಧಿಯಾದ ಶಿಂಬೆ ಮತ್ತು ಸೇನಾ ಮುಖಂಡರು ಈಗಾಗಲೇ ಕತರ್ ತಲುಪಿದ್ದಾರೆ.
42 ದಿನಗಳ ಕದನ ವಿರಾಮ ಒಪ್ಪಂದದ ಬಗ್ಗೆ ಚರ್ಚೆ ನಡೆಯುತ್ತಿದ್ದು ಇದನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಬೇಕು ಎಂಬ ಪ್ರಸ್ತಾಪ ಮುಂದಿದೆ. ಹಮಾಸ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. ಇಸ್ರೇಲ್ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳದಿದ್ದರೂ ತಾನು ಚರ್ಚೆಗೆ ಸಿದ್ದ ಎಂದು ಹೇಳಿದೆ. ಈ ಚರ್ಚೆಯು ಕತರ್ ಮತ್ತು ಈಜಿಪ್ಟಿನ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj