ಪ್ರಿಯಾಂಕ ಗಾಂಧಿಯ ಕೆನ್ನೆಯಂತಹ ರಸ್ತೆ ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿಯಿಂದ ವಿವಾದಾತ್ಮಕ ಹೇಳಿಕೆ! - Mahanayaka

ಪ್ರಿಯಾಂಕ ಗಾಂಧಿಯ ಕೆನ್ನೆಯಂತಹ ರಸ್ತೆ ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿಯಿಂದ ವಿವಾದಾತ್ಮಕ ಹೇಳಿಕೆ!

ramesh bidhuri
05/01/2025

ನವದೆಹಲಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಗಾಂಧಿಯ ಕೆನ್ನೆಯಂತಹ ನಯವಾದ ರಸ್ತೆ ನಿರ್ಮಿಸುತ್ತೇನೆ ಎಂದು ಬಿಜೆಪಿ  ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧುರಿ ಹೇಳಿಕೆ ನೀಡಿದ್ದು ಇದೀಗ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ ವಿಧಾನ ಸಭಾ ಚುನಾವಣೆ ಪ್ರಚಾರದ ವೇಳೆ ಈ ಹೇಳಿಕೆ ನೀಡಿರುವ ರಮೇಶ್ ಬಿಧುರಿ,  ಬಿಹಾರದಲ್ಲಿ ಹೇಮಾಮಾಲಿನಿಯ ಕೆನ್ನೆಯಂತಹ ರಸ್ತೆಯನ್ನು ನಿರ್ಮಿಸುವುದಾಗಿ ಲಾಲು ಹೇಳಿದ್ದರು. ಆದರೆ ಲಾಲು ಸುಳ್ಳು ಹೇಳಿದರು.  ನಾನು ನಿಮಗೆ ಭರವಸೆ ನೀಡುತ್ತೇನೆ, ಓಖ್ಲಾ ಮತ್ತು ಸಂಗಮ್ ವಿಹಾರ್ ನಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲಿ ಕೂಡ ಪ್ರಿಯಾಂಕ ಗಾಂಧಿಯ ಕೆನ್ನೆಯಂತಹ ರಸ್ತೆಯನ್ನು ನಿರ್ಮಿಸುತ್ತೇನೆ ಎಂದು  ಹೇಳಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು, ಬಿಧುರಿ ಅವರ ಹೇಳಿಕೆಗಳು ನಾಚಿಕೆಗೇಡಿವು. ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದೆ. ಮಹಿಳೆಯರ ಬಗ್ಗೆ ಬಿಜೆಪಿಗರ ಅಸಹ್ಯ ಮನಸ್ಥಿತಿಯನ್ನು ಅವರ ಹೇಳಿಕೆ ತೋರಿಸುತ್ತದೆ. ಇಂತಹ ವ್ಯಕ್ತಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಎಎಪಿ ಸಂಸದ ಸಂಜಯ್ ಸಿಂಗ್ ಕೂಡ ಬಿಧುರಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಇವರು ಬಿಜೆಪಿಯ ಅಭ್ಯರ್ಥಿಯೇ? ಬಿಜೆಪಿಯ  ಆಡಳಿತದಲ್ಲಿ ದೆಹಲಿಯಲ್ಲಿ ಮಹಿಳೆಯರು ಸುರಕ್ಷಿತವಾಗಿರಬಹುದೇ? ಈ ಹೇಳಿಕೆ ಬಿಜೆಪಿಯವರು ಮಹಿಳೆಯರ ಮೇಲೆ ಇಟ್ಟಿರುವ ಗೌರವ ಎಷ್ಟು ಎನ್ನುವುದನ್ನ ಸೂಚಿಸುತ್ತದೆ. ಇಂತಹ ಜನರ ಕೈಯಲ್ಲಿ ದೆಹಲಿ ಸುರಕ್ಷಿತವಾಗಿರಬಹುದೇ ಎಂದು ಪ್ರಶ್ನಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ