ಅಬಕಾರಿ ಅಧಿಕಾರಿಗಳ ದಾಳಿ: ಗಾಂಜಾ ಗಿಡ ವಶ, ಆರೋಪಿ ಬಂಧನ
ಮೂಡಿಗೆರೆ: ಮನೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಯನ್ನು ಬಂಧಿಸಿರುವ ಘಟನೆ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಮನೆಯೊಂದರಲ್ಲಿ ನಡೆದಿದೆ.
ಅಬಕಾರಿ ಉಪ ಆಯುಕ್ತರು ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ಮೂಡಿಗೆರೆ ಇವರ ನೇತೃತ್ವದಲ್ಲಿ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಪೃಥ್ವಿ ಎಂ. ಗೌಡ ಬಿನ್ ಮಹಿಪಾಲ್ ಮನೆಯಲ್ಲಿ ಅಕ್ರಮವಾಗಿ ಒಂದು ಗಾಂಜಾ ಗಿಡವನ್ನು ಬೆಳೆದಿರುವುದನ್ನು ಪತ್ತೆ ಮಾಡಿದ್ದು, ಅದರ ತೂಕ ಸುಮಾರು 707 ಗ್ರಾಂ ಇದ್ದು ಈ ಸಂಬಂಧ ಆರೋಪಿಯನ್ನು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಬಂಧಿಸಲಾಗಿದೆ.
ಪ್ರಕರಣವನ್ನು ದಾಖಲಿಸಿದ ಪೊಲೀಸರು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಲ್ಲಿಗೆ ಹಾಜರುಪಡಿಸಿ ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕರಾದ ಕೀರ್ತಿ ಕುಮಾರ್ , ಅಬಕಾರಿ ನಿರೀಕ್ಷಕರಾದ ಲೋಕೇಶ ಸಿ. ಸಿಬ್ಬಂದಿಗಳಾದ ರಮೇಶ್ ತುಳಜಣ್ಣನವರ್, ಶಂಕರ ಗುರುವ ,ಮತ್ತು ವಾಹನ ಚಾಲಕರಾದ ಪ್ರವೀಣ್ ಇವರು ಭಾಗಿಯಾಗಿರುತ್ತಾರೆ ಪ್ರಕರಣವನ್ನು ಅಬಕಾರಿ ನಿರೀಕ್ಷಕರು ಮೂಡಿಗೆರೆ ಉಪ ವಿಭಾಗ ಇವರು ದಾಖಲಿಸಿರುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: