ಪ್ರಬಲ ಶಸ್ತ್ರಾಸ್ತ್ರಗಳ ಭೂಗರ್ಭ ನಗರವನ್ನೇ ನಿರ್ಮಿಸಿದ ಇರಾನ್!
ಅತ್ಯಾಧುನಿಕ ಮಿಸೈಲ್ ಗಳು, ಡ್ರೋನ್ ಗಳೂ ಸೇರಿದಂತೆ ಪ್ರಬಲ ಶಸ್ತ್ರಾಸ್ತ್ರಗಳ ಭೂಗರ್ಭ ನಗರವನ್ನೇ ಇರಾನ್ ನಿರ್ಮಿಸಿದೆ ಎಂದು ಹೇಳಲಾಗಿದೆ. ಪರ್ಷಿಯನ್ ಮತ್ತು ಒಮಾನ್ ಸಮುದ್ರದ ನಡುವೆ ಈ ಆಯುಧಗಳ ನಗರವನ್ನು ಸೃಷ್ಟಿಸಲಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಕಡೆಯಿಂದ ಇರಾನ್ ನ ಶಸ್ತ್ರಾಗಾರಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರ ನಡುವೆಯೇ ಇದೀಗ ಭೂಗರ್ಭ ಶಸ್ತ್ರಾಸ್ರ ಸಂಗ್ರಹ ನಗರವನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ವಾರ ನಡೆದ ಸೈನಿಕ ಅಭ್ಯಾಸದ ವೇಳೆ ಈ ಎರಡು ಭೂಗರ್ಭ ನಗರಗಳನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮಿಸೈಲ್ ಗಳು ಇವೆ. ಮಾತ್ರ ಅಲ್ಲ ಈ ಭೂಗರ್ಭ ನಗರದಲ್ಲಿ ವಿಮಾನ ನಿಲ್ದಾಣವೂ ಇದೆ. ಇಸ್ರೇಲ್ ಮತ್ತು ಅಮೆರಿಕಾದ ದಾಳಿಯನ್ನು ತಡೆದು ನಿಲ್ಲುವುದಕ್ಕೆ ಪೂರಕವಾಗಿ ಈ ಸೇನಾ ಸ್ಥಾವರವನ್ನು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.
ಎಂತಹ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ದರಿದ್ದೇವೆ ಮತ್ತು ಅದಕ್ಕೆ ಪೂರಕ ತಯಾರಿಯನ್ನು ಮಾಡಿಕೊಂಡಿದ್ದೇವೆ ಅನ್ನುವುದನ್ನು ಶತ್ರು ರಾಷ್ಟ್ರಗಳಿಗೆ ತಿಳಿಸುವುದು ನಮ್ಮ ಸೇನಾ ಕಾರ್ಯಚರಣೆಯ ಉದ್ದೇಶವಾಗಿತ್ತು ಎಂದು ಇರಾನ್ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj