ಹರ್ಯಾಣದಲ್ಲಿ ಹೆಣ್ಣು ಗಂಡಿನ ಅನುಪಾತವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ: ವರದಿ
ದೇಶದಲ್ಲಿಯೇ ಹೆಣ್ಣು ಗಂಡಿನ ಅನುಪಾತವು ಹರಿಯಾಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಈ ಕುರಿತಂತೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸಾವಿರ ಗಂಡು ಮಕ್ಕಳಿಗೆ 910 ಹೆಣ್ಣು ಮಕ್ಕಳಿದ್ದು ಈ ಕುರಿತಂತೆ ಸಂಸದ ಅಸುದುದ್ದೀನ್ ಓವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಹರಿಯಾಣವನ್ನು ಆಳುತ್ತಿರುವ ಬಿಜೆಪಿ ಎಂಥಾ ಆಡಳಿತವನ್ನು ನೀಡಿದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ ಎಂದವರು ಹೇಳಿದ್ದಾರೆ.
ಈ ದೇಶದಲ್ಲಿ ಪುರುಷರನ್ನು ಮಾಂಸದ ಹೆಸರಲ್ಲಿ ಹತ್ಯೆ ಮಾಡಲಾಗುತ್ತೆ. ಆದರೆ ನಮ್ಮದೇ ಹೆಣ್ಣು ಮಕ್ಕಳನ್ನು ಭ್ರೂಣದಲ್ಲೇ ಹತ್ಯೆ ಮಾಡಲಾಗುತ್ತಿರುವ ಬಗ್ಗೆ ನಮಗೆ ಯಾವ ಭಾವನೆಯೂ ಇಲ್ಲ ಎಂದು ಓವೈಸಿ ಹೇಳಿದ್ದಾರೆ.
ಇದೇ ವೇಳೆ ಈ ದೇಶದಲ್ಲಿ ಲಿಂಗಾನುಪಾತದ ಅತ್ಯಂತ ಹೆಚ್ಚಿರುವುದು ಮುಸ್ಲಿಮರಲ್ಲಿ ಎಂದು ಕೂಡ ಅವರು ಹೇಳಿದ್ದಾರೆ. ಯಾಕೆಂದರೆ ಇಸ್ಲಾಂ ಹೆಣ್ಣು ಶಿಶು ಹತ್ಯೆಯನ್ನ ವಿರೋಧಿಸಿದೆ. ಆದರೆ ಮುಸ್ಲಿಮರ ಜನಸಂಖ್ಯೆಯನ್ನು ಟೀಕಿಸುವ ಬಿಜೆಪಿ ಆಡಳಿತದ ರಾಜ್ಯದಲ್ಲಿ ಹೆಣ್ಣು ಮಕ್ಕಳು ಭ್ರೂಣದಲ್ಲೇ ಹತ್ಯೆಗೀಡಾಗುತ್ತಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj