ಮ್ಯಾಟ್ರಿಮೋನಿಯಲ್ಲಿ 2ನೇ ವಿವಾಹವಾದ ವ್ಯಕ್ತಿಗೆ ಶಾಕ್ ನೀಡಿದ ಮಹಿಳೆ!
ಮ್ಯಾಟ್ರಿಮೋನಿ ಮೂಲಕ ಸಂಗಾತಿಯನ್ನು ಆಯ್ಕೆ ಮಾಡಿದ್ದ 62 ವರ್ಷದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಂದ ಮೋಸ ಹೋಗಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ರಾಮಕೃಷ್ಣ(62) ಎಂಬವರು ಮೋಸ ಹೋದವರಾಗಿದ್ದಾರೆ. ಮೊದಲ ಪತ್ನಿತನ್ನು ಕಳೆದುಕೊಂಡಿದ್ದ ರಾಮಕೃಷ್ಣ ಮ್ಯಾಟ್ರಿಮೋನಿಯಲ್ಲಿ ಎರಡನೇ ಮದುವೆಗಾಗಿ ಸಂಗಾತಿಯನ್ನು ಹುಡುಕಾಡಿದ್ದಾರೆ. ಈ ವೇಳೆ ವಿಜಯಲಕ್ಷ್ಮೀ ಎಂಬ ಮಹಿಳೆ ಪರಿಚಯವಾಗಿದ್ದಾಳೆ. 2020ರಲ್ಲಿ ವಿಜಯಲಕ್ಷ್ಮೀ ಜೊತೆ ರಾಮಕೃಷ್ಣ ಎರಡನೇ ವಿವಾಹವಾಗಿದ್ದರು.
ಮದುವೆಯ ಬಳಿಕ ಮಹಿಳೆ ಚಿನ್ನಾಭರಣ, ಹಣಕ್ಕಾಗಿ ರಾಮಕೃಷ್ಣ ಅವರನ್ನು ಪೀಡಿಸಲು ಆರಂಭಿಸಿದ್ದಳು. ಮನೆಯಲ್ಲಿದ್ದ 25 ಲಕ್ಷ ಹಣವನ್ನು ಕಳವು ಮಾಡಿದ್ದಳು ಎನ್ನುವ ಆರೋಪ ಕೂಡ ಇದೆ. ಆದರೆ ಇದಕ್ಕಿಂತಲೂ ದೊಡ್ಡ ಮೋಸವನ್ನೇ ಆಕೆ ಮಾಡಿದ್ದಳು.
ವಿಜಯ ಲಕ್ಷ್ಮೀಯ ಪೂರ್ವಾಪರ ವಿಚಾರಿಸಿದ ವೇಳೆ ಆಕೆಗೆ ಈಗಾಗಲೇ 7 ವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಲ್ಲದೇ ನ್ಯಾಯಾಲಯದಲ್ಲಿ ಸುಳ್ಳು ದೂರು ನೀಡಿದ್ದಾಳೆ ಎನ್ನಲಾಗಿದೆ.
ಸದ್ಯ ವಿವಾಹದ ಮೂಲಕ ವಂಚನೆ ಎಸಗಿರುವ ವಿಜಯಲಕ್ಷ್ಮೀ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಪಿಸಿಆರ್ ಆಧರಿಸಿ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತನ್ನ ವೃದ್ಧಾಪ್ಯದ ಕಷ್ಟಸುಖಗಳಲ್ಲಿ ಜೊತೆಗಿರುಲು ಸಂಗಾತಿ ಬಯಸಿದ್ದ ವ್ಯಕ್ತಿ ಇದೀಗ ಮೋಸ ಹೋಗಿದ್ದಾರೆ. ಯಾವುದೇ ಸಂಗಾತಿ ಆಯ್ಕೆಯ ಸಂದರ್ಭದಲ್ಲಿ ಪೂರ್ವಪರ ತಿಳಿಯುವುದು ಮುಖ್ಯ. ಇಲ್ಲವಾದರೆ ಆ ಬಳಿಕ ಸಂಕಷ್ಟಗಳಿಗೆ ಸಿಲುಕಬೇಕಿದೆ. ಇತ್ತೀಚೆಗೆ ವಿವಾಹದ ವಿಚಾರದಲ್ಲೂ ಮೋಸಗಳು ನಡೆಯುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: