ಮಹಿಳೆಯ ದೇಹದ ಕುರಿತ ಕಮೆಂಟ್ ಕೂಡಾ ಲೈಂಗಿಕ ಕಿರುಕುಳ: ಕೇರಳ ಹೈಕೋರ್ಟ್ ತೀರ್ಪು - Mahanayaka
10:15 PM Thursday 9 - January 2025

ಮಹಿಳೆಯ ದೇಹದ ಕುರಿತ ಕಮೆಂಟ್ ಕೂಡಾ ಲೈಂಗಿಕ ಕಿರುಕುಳ: ಕೇರಳ ಹೈಕೋರ್ಟ್ ತೀರ್ಪು

09/01/2025

ಮಹಿಳೆಯ ದೇಹ ರಚನೆ ಕುರಿತ ಕಮೆಂಟ್‌ಗಳು‌ ಸಹ ಲೈಂಗಿಕ ಕಿರುಕುಳವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ. ಆರೋಪಿಯ ಕರೆಗಳು ಮತ್ತು ಸಂದೇಶಗಳು ಮಹಿಳೆಯ ಘನತೆಗೆ ಚ್ಯುತಿ ತರುವ ಹಾಗೂ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದ್ದವು ಎಂದು ಸಂತ್ರಸ್ತೆಯ ಪರ ವಕೀಲರು ವಾದಿಸಿದ್ದರು.

ತಮ್ಮ ವಿರುದ್ಧ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣ ವಜಾಗೊಳಿಸುವಂತೆ ಕೋರಿ ಕೇರಳ ರಾಜ್ಯ ವಿದ್ಯುತ್‌ ಮಂಡಳಿ ಮಾಜಿ ಉದ್ಯೋಗಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎ. ಬದ್ರುದ್ದೀನ್‌ ಈ ತೀರ್ಪು ನೀಡಿದರು.


ADS

ಆರೋಪಿಯು 2013 ರಿಂದ ತಮ್ಮ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ. 2016 – 17 ರಲ್ಲಿಆಕ್ಷೇಪಾರ್ಹ ಸಂದೇಶ ಮತ್ತು ಧ್ವನಿ ಕರೆಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಆರೋಪಿ ವಿರುದ್ಧ ಕೇರಳ ರಾಜ್ಯ ವಿದ್ಯುತ್‌ ಮಂಡಳಿ ಮತ್ತು ಪೊಲೀಸರಿಗೆ ಸಂತ್ರಸ್ತ ಮಹಿಳೆಯು ದೂರು ನೀಡಿದ್ದರು.

ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಆರೋಪಿ, ‘ವ್ಯಕ್ತಿಯೊಬ್ಬರು ಆಕರ್ಷಕ ದೇಹ ರಚನೆ ಹೊಂದಿದ್ದಾರೆ ಎನ್ನುವುದು ಐಪಿಸಿಯ ಕಲಂ 354ಎ, 509 ಮತ್ತು ಕೇರಳ ಪೊಲೀಸ್‌ ಕಾಯ್ದೆಯ ಕಲಂ 120 (ಒ) ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಾದಿಸಿದ್ದ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ