ನಿಮಗೆ ಕೈ ಮುಗಿದು ಕೇಳುತ್ತೇನೆ, ಸಿಡಿ ವಿಚಾರ ನನ್ನನ್ನು ಏನೂ ಕೇಳಬೇಡಿ | ಸತೀಶ್ ಜಾರಕಿಹೊಳಿ ಮನವಿ - Mahanayaka
1:26 PM Thursday 12 - December 2024

ನಿಮಗೆ ಕೈ ಮುಗಿದು ಕೇಳುತ್ತೇನೆ, ಸಿಡಿ ವಿಚಾರ ನನ್ನನ್ನು ಏನೂ ಕೇಳಬೇಡಿ | ಸತೀಶ್ ಜಾರಕಿಹೊಳಿ ಮನವಿ

sathish jarakiholi
29/03/2021

ಬೆಳಗಾವಿ: ನಿಮಗೆ ಕೈ ಮುಗಿದು ಕೇಳುತ್ತೇನೆ. ಸಿಡಿ ವಿಚಾರವಾಗಿ ನನ್ನ ಬಳಿ ಏನನ್ನೂ ಕೇಳಬೇಡಿ. ನನಗೆ ಪ್ರತೀ ದಿನ ಹೇಳಿದ್ದನ್ನೇ ಹೇಳಿ ಹೇಳಿ ಸಾಕಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಡಿ ವಿಚಾರವಾಗಿ ಪ್ರತೀ ದಿನ ಮಾಧ್ಯಮಗಳ ಪ್ರಶ್ನೆಗಳಿಂದ ರೋಸಿ ಹೋಗಿರುವ ಸತೀಶ್ ಜಾರಕಿಹೊಳಿ. ನಾನು ಕೈ ಮುಗಿದು ಕೇಳುತ್ತೇನೆ, ಪ್ರತೀ ದಿನ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳಬೇಡಿ. ನನಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ ಎಂದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶಾಸಕರಾದ ಎಂ.ಬಿ. ಪಾಟೀಲ ಹಾಗೂ ರಾಮಲಿಂಗಾರೆಡ್ಡಿ ಜೊತೆ ಸಭೆ ನಡೆಸಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್‌ ವಿರುದ್ಧ ಆರೋಪಿಸಿದರೆ ನಾನೇನು ಮಾಡಲಿ? ಆ ಬಗ್ಗೆ ಏನೂ ಕೇಳಬೇಡಿ. ಬೇರೇನಾದರೂ ಕೇಳಿ’ ಎಂದರು.

ಕಾನೂನಿದೆ.  ಪೊಲೀಸರಿದ್ದಾರೆ.  ಯುವತಿಯನ್ನು ರಕ್ಷಣೆ ಮಾಡುವುದು ಪೊಲೀಸರ ಕೆಲಸ ಎಂದು ಹೇಳಿದರು.  ಸತೀಶ್ ಜಾರಕಿಹೊಳಿ ಅವರ ಮಾತುಗಳನ್ನೇ ಬಹುತೇಕ ನಾಗರಿಕರು ಕೂಡ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಚರ್ಚೆಗೆ ಮಾಡಲು ಕೇವಲ ರಮೇಶ್ ಜಾರಕಿಹೊಳಿ ವಿಚಾರ ಮಾತ್ರವೇ ಇದೆಯೇ? ಬೇರೇನೂ ಇಲ್ಲವೇ ಎಂದು.

ಇನ್ನೂ ಮಾಧ್ಯಮಗಳು ಸಂತ್ರಸ್ತ ಯುವತಿಯನ್ನು ಸಂತ್ರಸ್ತೆ ಎನ್ನದೇ ಸಿಡಿ ಲೇಡಿ ಎಂದು ಹೇಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವ ರೀತಿಯ ಪತ್ರಿಕೋದ್ಯಮ? ಎಂದು ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ