ಡಿಸಿಎಂ ಡಿ.ಕೆ.ಶಿವಕುಮಾರ್ ರಿಂದ ಮುಂದುವರೆದ ಟೆಂಪಲ್ ರನ್: ನಾಳೆ ಶೃಂಗೇರಿಗೆ ಭೇಟಿ
10/01/2025
ಚಿಕ್ಕಮಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ನಡೆಸುತ್ತಿದ್ದಾರೆ. ನಿನ್ನೆ ತಮಿಳುನಾಡು ಆಯ್ತು, ನಾಳೆ ಶೃಂಗೇರಿಗೆ ಭೇಟಿ ನೀಡಲಿದ್ದು, ಶೃಂಗೇರಿ ಶಾರದಾಂಬೆ, ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.
ಶೃಂಗೇರಿ ಮಠದಲ್ಲಿ ನಡೆಯುತ್ತಿರುವ ಸುವರ್ಣ ಮಹೋತ್ಸವದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಭಾರತೀ ತೀರ್ಥ ಮಹಾ ಜಗದ್ಗುರುಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷ ಹಿನ್ನೆಲೆ ಮಠದಲ್ಲಿ ಸ್ತೋತ್ರ, ತ್ರಿವೇಣಿಯ ಮಹಾ ಸಮರ್ಪಣೆ ಕಾರ್ಯಕ್ರಮ ನಡೆಯುತ್ತಿದೆ.
ಏಕಕಾಲದಲ್ಲಿ 50,000 ಜನರಿಂದ ಮಂತ್ರ, ಸ್ತೋತ್ರ ಪಠಣ ನಡೆಯಲಿದೆ. ಬೃಹತ್ ವೇದಿಕೆಯ ಕಾರ್ಯಕ್ರಮ ಹಿನ್ನೆಲೆ ಡಿಸಿಎಂ ಡಿಕೆಶಿ, ಕೆ.ಜೆ.ಜಾರ್ಜ್, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಲಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: