ಅಂದು ದೇವರ ಅವತಾರ: ಇಂದು ನಾನು ಧರೆಗಿಳಿದ ಮನುಷ್ಯ ಎಂದ ಪ್ರಧಾನಿ ಮೋದಿ!
ಕಳೆದ ಚುನಾವಣೆಯ ಸಮಯದಲ್ಲಿ ದೇವ ಅವತಾರವಾಗಿದ್ದ ನರೇಂದ್ರ ಮೋದಿ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಧರೆಗಿಳಿದ ಮನುಷ್ಯ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾನು ಮನುಷ್ಯ, ದೇವರಲ್ಲ, ನಾನು ಕೂಡ ತಪ್ಪು ಮಾಡಿರಬೇಕು’ ಎಂದು ಪಾಡ್ ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ರ ಪಾಡ್ ಕ್ಯಾಸ್ಟ್ ನ ಮುಂದಿನ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿದ್ದಾರೆ. ಗುರುವಾರ ಸಂಜೆ ಪಾಡ್ ಕ್ಯಾಸ್ಟ್ ನ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಮೋದಿ ಅವರು ಕಾಮತ್ ರೊಂದಿಗೆ ಮಾತನಾಡುವುದು ಟ್ರೇಲರ್ ನಲ್ಲಿ ಕಂಡು ಬಂದಿದೆ.
ಸಂದರ್ಶನದ ವೇಳೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣ ಉಲ್ಲೇಖಿಸಿರುವ ಮೋದಿ, “ತಪ್ಪುಗಳು ಸಂಭವಿಸುತ್ತದೆ. ನಾನಂತೂ ತಪ್ಪು ಮಾಡಿರಬೇಕು. ನಾನು ಮನುಷ್ಯ, ದೇವರಲ್ಲʼ ಎಂದು ಹೇಳಿದ್ದಾರೆ.
‘ಪೀಪಲ್ ವಿದ್ ದಿ ಪ್ರೈಮ್ ಮಿನಿಸ್ಟರ್’ಎಂಬ ಶೀರ್ಷಿಕೆಯ ಪಾಡ್ ಕ್ಯಾಸ್ಟ್ ನಲ್ಲಿ ನಾನು ಪಾಡ್ ಕ್ಯಾಸ್ಟ್ನಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.
ತನ್ನ ಆಧಿಕಾರದ ಮೊದಲ ಅವಧಿಯಲ್ಲಿ ಜನರು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು ಮತ್ತು ನಾನು ದಿಲ್ಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಜನರು ಧ್ಯೇಯದೊಂದಿಗೆ ರಾಜಕೀಯಕ್ಕೆ ಬರಬೇಕು ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ, ಒಳ್ಳೆಯ ಜನರು ರಾಜಕೀಯಕ್ಕೆ ಬರುವುದನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj