ಕತ್ತರಿಸಿದ ಕಾಲಿನ ಪಾದದೊಂದಿಗೆ ಫೋಟೋವನ್ನು ಹಂಚಿಕೊಂಡ ನರಬೋಜಿಗಳು!
ಪಾಪುವ ನುಗಿನಿಯಾ ದೇಶದ ನರಬೋಜಿಗಳು ಮತ್ತೊಮ್ಮೆ ಸುದ್ದಿಗೆ ಈಡಾಗಿದ್ದಾರೆ. ಕತ್ತರಿಸಿದ ಕಾಲಿನ ಪಾದದೊಂದಿಗೆ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇವರ ಈ ಚಿತ್ರವನ್ನು ಪಾಪುವ ನ್ಯೂಗಿನಿಯಾದ ಪ್ರಸಿದ್ಧ ಪತ್ರಿಕೆ ಪಾಪುವ ನ್ಯೂ ಗಿನಿ ತನ್ನ ಮುಖಪುಟದಲ್ಲಿ ಹಂಚಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಈ ಮಾನವ ಮಾಂಸವನ್ನು ಭಕ್ಷಿಸುವ ಮನುಷ್ಯರು ಭಯದ ಜೊತೆಗೆ ಕುತೂಹಲವನ್ನು ಜಾಗತಿಕವಾಗಿಯೇ ಹುಟ್ಟಿಸಿದ್ದಾರೆ.
ವಿಡಿಯೋದಲ್ಲಿ ಇರುವ ವ್ಯಕ್ತಿಗಳು ಮಾನವ ಮಾಂಸವನ್ನು ಭಕ್ಷಿಸುವ ದೃಶ್ಯ ಇಲ್ಲವಾದರೂ ಕತ್ತರಿಸಲಾದ ಪಾದವನ್ನು ನಾಲಗೆಯಿಂದ ನೆಕ್ಕಿ ರುಚಿ ನೋಡುತ್ತಿರುವುದು ಸೆರೆಯಾಗಿದೆ.
ಬಿಡುಗಡೆಗೊಂಡಿರುವ ಈ ದೃಶ್ಯವು ಭಯಾನಕವಾಗಿದೆ ಮತ್ತು ಇದು ನರಭೋಜಿಗಳ ಭೀಕರ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪಪುವ ನ್ಯೂಗಿನಿಯಾ ರಕ್ಷಣಾ ಸಚಿವ ಪೀಟರ್ ಹೇಳಿದ್ದಾರೆ. ಇಬ್ಬರು ಸಹೋದರರ ನಡುವಿನ ಜಗಳದ ಬಳಿಕ ಈ ಕಾಲಿನ ಪಾದವನ್ನು ಕತ್ತರಿಸಲಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಂದಹಾಗೇ ಪಾಪುವ ನುಗಿನಿಗೆ ಮಾನವ ಮಾಂಸ ಭಕ್ಷಣೆಯ ಐತಿಹಾಸಿಕ ಹಿನ್ನೆಲೆ ಇದೆ. ಒಂದು ನಿರ್ದಿಷ್ಟ ಗೋತ್ರವು ಹೀಗೆ ಮಾಂಸ ಭಕ್ಷಣೆಯಲ್ಲಿ ತೊಡಗಿತ್ತು. ಆದರೆ ಇದೀಗ ಈ ಮಾಂಸ ಭಕ್ಷಣೆಯು ಇತರ ಗೋತ್ರಗಳಿಗೂ ಹರಡಿದೆ ಅನ್ನುವುದು ಭಯಾನಕ ವಿಷಯ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj