ಶಾಹಿ ಮಸೀದಿಯ ಪರಿಸರದ ಬಾವಿಯ ವಿಚಾರ: ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ - Mahanayaka
1:14 PM Wednesday 5 - February 2025

ಶಾಹಿ ಮಸೀದಿಯ ಪರಿಸರದ ಬಾವಿಯ ವಿಚಾರ: ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಸೂಚನೆ

10/01/2025

ಉತ್ತರ ಪ್ರದೇಶದ ಶಂಬಾಲ್ ನಲ್ಲಿರುವ ಶಾಹಿ ಮಸೀದಿಯ ಪರಿಸರದ ಬಾವಿಯ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಪಾಡಬೇಕು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ನೆಲೆಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಬಾವಿಯು ಮಂದಿರಕ್ಕೆ ಸೇರಿದ್ದಾಗಿದೆ ಎಂಬ ಹೆಸರಲ್ಲಿ ಸಂಶೋಧನೆ ನಡೆಸಬಾರದು ಮತ್ತು ತನ್ನ ಅನುಮತಿ ಇಲ್ಲದೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಸುಪ್ರೀಂಕೋರ್ಟು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಮತ್ತು ಜಸ್ಟಿಸ್ ಸಂಜಯ್ ಕುಮಾರ್ ಅವರ ದ್ವಿ ಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಎರಡು ವಾರಗಳೊಳಗೆ ಪರಿಸ್ಥಿತಿಯ ವರದಿಯನ್ನು ಒಪ್ಪಿಸುವಂತೆಯೂ ಅದು ಅಧಿಕಾರಿಗಳಿಗೆ ಸೂಚಿಸಿದೆ.

ಮಸೀದಿಯ ಸರ್ವೆ ನಡೆಸುವುದಕ್ಕೆ ನೀಡಲಾದ ಆದೇಶವನ್ನು ಪ್ರಶ್ನಿಸಿ ಶಾಹಿ ಜುಮ್ಮಾ ಮಸೀದಿಯ ಮ್ಯಾನೇಜ್ಮೆಂಟ್ ಕಮಿಟಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಸರ್ವೆ ನಡೆಸಲು ನೀಡಿದ ಆದೇಶವು ಪ್ರಾಣ ಹಾನಿಗೂ ಅಕ್ರಮಕ್ಕೂ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತಲ್ಲದೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಲಾಗಿತ್ತು.

ಮಸೀದಿ ಬಾವಿಯಿಂದ ನಾವು ಹಿಂದಿನಿಂದಲೇ ನೀರನ್ನು ಪಡೆಯುತ್ತಿದ್ದೇವೆ ಎಂದು ಮಸೀದಿ ಪರ ವಕೀಲ ಹುಸೇಫಾ ಅಹಮದ್ ವಾದಿಸಿದ್ರು ಈ ಮಸೀದಿಯನ್ನು ಹರಿ ಮಂದಿರ್ ಎಂದು ಹೇಳ ಲಾಗುತ್ತಿರುವುದು ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳು ಆರಂಭಿಸುವುದಕ್ಕೆ ತಯಾರಿ ನಡೆಯುತ್ತಿರುವುದರ ಬಗ್ಗೆ ನ್ಯಾಯವಾದಿ ಆತಂಕ ವ್ಯರ್ಥಪಡಿಸಿದರು. ಆದರೆ ಅಂತಹ ಯಾವುದೇ ಚಟುವಟಿಕೆಗೆ ತಾನು ಅನುಮತಿ ನೀಡಲ್ಲ ಎಂದು ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಸ್ಪಷ್ಟಪಡಿಸಿದ್ದರು. ಇದೇ ವೇಳೆ ಈ ಬಾವಿಯು ಮಸೀದಿಯ ವ್ಯಾಪ್ತಿಯಿಂದ ಹೊರಗಿರುವುದಾಗಿ ಹಿಂದೂ ಗುಂಪಿನ ಪರವಾಗಿ ವಾದಿಸುತ್ತಿರುವ ವಿಷ್ಣು ಶಂಕರ್ ಜೈನ್ ವಾದಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ