ಕೆರೆಗೆ ಬಿದ್ದು ತಾಯಿ—ಮಗಳ ದಾರುಣ ಸಾವು
ತುಮಕೂರು: ತಾಯಿ ಮತ್ತು ಮಗಳು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ.
ತಾಲ್ಲೂಕಿನ ನಿಟ್ಟೂರು ಹೋಬಳಿ ವಿರುಪಾಕ್ಷಿ ಪುರ ಗ್ರಾಮದ ತಾಯಿ ಪ್ರೇಮ್ ಕುಮಾರಿ (50) ವರ್ಷ ಮಗಳ ಪೂರ್ಣಿಮಾ (30) ಮೃತ ದುರ್ದೈವಿಗಳು.
ಮಗಳು ಪೂರ್ಣಿಮಾ ಬುದ್ದಿಮಾಂದ್ಯ ಯುವತಿಯಾಗಿದ್ದು, ಈ ಕಾರಣಕ್ಕೆ ಮಾನಸಿಕವಾಗಿ ತಾಯಿ ಮನನೊಂದಿದ್ದಳು. ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಗುರುವಾರ ಎಮ್ಮೆ ಮೇಯಿಸುವ ನಿಟ್ಟಿನಲ್ಲಿ ತೋಟದ ಬಳಿ ಹೋದ ಇಬ್ಬರು ಸಮೀಪದ ಅದಲಗೆರೆ ಗ್ರಾಮದ ಕೆರೆಗೆ ಬಿದ್ದಿದ್ದಾರೆ. ರಾತ್ರಿ ಇಡೀ ಗ್ರಾಮಸ್ಥರ ಸಹಾಯದಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು.
ಶುಕ್ರವಾರ ಮೃತ ದೇಹಗಳು ಪತ್ತೆಯಾಗಿವೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: