ರಾತ್ರೋರಾತ್ರಿ ದಲಿತರ ಶೆಡ್ ಗಳು ತೆರವು, ಅಂಬೇಡ್ಕರ್ ಫೋಟೋ ಕಿತ್ತು ಎಸೆದು ಹೋದ ಅಧಿಕಾರಿಗಳು
ಕಾರಟಗಿ : ತಾಲೂಕಿನ ತಹಶೀಲ್ದಾರ್ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ ಕಾರಟಗಿ ಸರ್ವೆ ನಂಬರ್ 416 ರ ಕೆರೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳು ಹಾಕಿಕೊಂಡಿರುವ ಶೆಡ್ಡುಗಳನ್ನು ಕಾರಟಗಿ ತಹಶೀಲ್ದಾರ್ ಕುಮಾರಸ್ವಾಮಿಯವರು ಕಿತ್ತು ಹಾಕಿಸಿದ್ದಾರೆ. ಯಾವುದೇ ಸೂಚನೆ ನೀಡದೆ ಏಕಾಏಕಿ ಶೆಡ್ ಗಳನ್ನು ಕಿತ್ತಿ ಹಾಕಿರುವುದರಿಂದ ದಲಿತ ಕುಟುಂಬಗಳು ಬೀದಿ ಪಾಲಾಗಿವೆ.
ರಾತ್ರೋರಾತ್ರಿ ಶೆಡ್ಡುಗಳನ್ನು ಜೆಸಿಬಿಯಿಂದ ಕಿತ್ತು ಹಾಕಿಸಿದ್ದಾರೆ ಶೆಡ್ಡಿನಲ್ಲಿರುವ ಅಂಬೇಡ್ಕರ್ ಫೋಟೋ ಜೆಸಿಬಿ ಯಿಂದ ವಿರೂಪಗೊಳಿಸಲಾಗಿದೆ ಅಧಿಕಾರಿಗಳ ಸೂಚನೆ ಮೇರೆಗೆ ಕೃತ್ಯ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಘಟನೆಗೆ ಸಂಬಂಧಪಟ್ಟಂತೆ ಕಾರಟಗಿ ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಶೆಟ್ಟಿ ಅವರಿಗೆ ದಲಿತ ಮುಖಂಡರು ಪ್ರಶ್ನೆ ಮಾಡಿದಾಗ ಪುರಸಭೆ ಮುಖ್ಯ ಅಧಿಕಾರಿ ಜೆಸಿಬಿ ಮಾತ್ರ ಕಳಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.
ತಹಶೀಸಿಲ್ದಾರರು ಜೆಸಿಬಿ ಅವಶ್ಯಕತೆ ಇದೆ ಕಳುಹಿಸಿಕೊಡಿ ಎಂದು ಕೇಳಿದ್ದರು. ಆದರೆ ಇವರು ಈ ರೀತಿ ಶೆಡ್ಡುಗಳನ್ನು ತೆರವುಗೊಳಿಸುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ಮುಖ್ಯ ಅಧಿಕಾರಿ ಹೇಳಿದ್ದಾರೆ. ಕಾರಟಗಿ ತಹಶೀಲ್ದಾರ್ ಕುಮಾರಸ್ವಾಮಿಯವರಿಗೆ ದಲಿತ ಮುಖಂಡ ಜಮದಗ್ನಿ ಯವರು ಸಾರ್ವಜನಿಕರ ಫೋನ್ ಕರೆ ಸ್ವೀಕರಿಸುವಂತೆ ಒತ್ತಾಯಿಸಿದಾಗ ಮಾತಿನ ಚಕಮಕಿ ನಡೆದಿತ್ತು ತಹಶೀಲ್ದಾರರು ಮತ್ತು ದಲಿತ ಮುಖಂಡ ಇಬ್ಬರು ಏರು ಧ್ವನಿಯಲ್ಲಿ ಮಾತನಾಡಿ ಕೊಂಡಿದ್ದರು. ಅದನ್ನೇ ಮನಸಿನಲ್ಲಿ ಇಟ್ಟುಕೊಂಡಿರುವ ತಹಶೀಲ್ದಾರ್ ಕುಮಾರಸ್ವಾಮಿ ಅವರು ಜಮದಗ್ನಿ ಚೌಡಕಿ ದಲಿತ ವಿಮೋಚನ ಸೇನೆಯ ಸಂಘದ ಪದಾಧಿಕಾರಿಗಳ ಕುಟುಂಬಗಳು ಹಾಕಿಕೊಂಡಿರುವ ಶೆಡ್ಡುಗಳನ್ನು ರಾತ್ರೋರಾತ್ರಿ ಕಿತ್ತು ಹಾಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಿಥಿಲಗೊಂಡಿರುವ ಶೆಡ್ಡಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ವಿರೂಪಗೊಂಡಿದೆ ಸ್ಥಳಕ್ಕೆ ಠಾಣೆಯ ಪೇದೆಗಳಾದ ರಮೇಶ್ ಹಿಟ್ನಾಳ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯವರು ಬಂದು ಪರಿಶೀಲನೆ ನಡೆಸಿದ್ದಾರೆ.
ಕಾರಟಗಿ ತಹಶೀಲ್ದಾರರು ಯಾವುದೇ ಸೂಚನೆ ನೀಡದೆ ಏಕಾಏಕಿ ಶೆಡ್ ಗಳನ್ನು ಕಿತ್ತುಹಾಕುವ ಭರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ವಿರೂಪಗೊಳಿಸಿ ಅಪಮಾನ ಮಾಡಿದ್ದಾರೆ.
ತಹಶೀಲ್ದಾರ್ ಕುಮಾರಸ್ವಾಮಿ ಕಂದಾಯ ನಿರೀಕ್ಷಕರಾದ ಸಂಗಮ ಹಿರೇಮಠ್ ಗ್ರಾಮ ಲೆಕ್ಕಾಧಿಕಾರಿ ದೊಡ್ಡನಗೌಡ ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಲು ಕಾರಟಗಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದರು, ಆದರೆ ಠಾಣೆಯ ಪಿಐ ಸುಧೀರ್ ಬೆಂಕಿ ಅವರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಲು ದಲಿತ ವಿಮೋಚನ ಸೇನೆ ಚಿಂತನೆ ನಡೆದಿದೆ.
ಈ ಸಂದರ್ಭದಲ್ಲಿ ವಿಮೋಚನ ಸೇನೆಯ ಜಿಲ್ಲಾಧ್ಯಕ್ಷ ಜಮದಗ್ನಿ ಚೌಡಕಿ, ಜಿಲ್ಲಾ ಉಪಾಧ್ಯಕ್ಷ ದುರ್ಗೇಶ್ ಕೆಂಗೇರಿ ತಾಲೂಕ ಅಧ್ಯಕ್ಷ ಮೌನೇಶ್ ಭಜರಂಗಿ ಪದಾಧಿಕಾರಿಗಳಾದ ಗಾಳೆಪ್ಪ ಹನುಮಂತಪ್ಪ ಗಿಣಿಗೇರಾ ನಾಗಲಿಂಗಪ್ಪ ಮಲ್ಲಪ್ಪ ಇತರರು ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: