ನಾಲ್ಕು ಮಕ್ಕಳನ್ನು ಹೆತ್ತ ಬ್ರಾಹ್ಮಣ ಕುಟುಂಬಕ್ಕೆ ಒಂದು ಲಕ್ಷ ಬಹುಮಾನ: ಮಧ್ಯಪ್ರದೇಶದಲ್ಲಿ ಬಂಪರ್ ಆಫರ್

ನಾಲ್ಕು ಮಕ್ಕಳನ್ನು ಪ್ರಸವಿಸಲು ನಿರ್ಧರಿಸುವ ಬ್ರಾಹ್ಮಣ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಮಧ್ಯಪ್ರದೇಶ ಸರಕಾರ ಘೋಷಿಸಿದೆ. ಮಧ್ಯಪ್ರದೇಶದ ಸಚಿವ ಮತ್ತು ಪರಶುರಾಮ್ ಬೋರ್ಡಿನ ಅಧ್ಯಕ್ಷರೂ ಆಗಿರುವ ಪಂಡಿತ್ ವಿಷ್ಣು ರಜೋರಿಯ ಅವರು ಈ ಘೋಷಣೆ ಮಾಡಿದ್ದಾರೆ.
ನನಗೆ ಯುವ ಸಮೂಹದಲ್ಲಿ ತುಂಬಾ ನಿರೀಕ್ಷೆಗಳಿವೆ. ಹಿರಿಯರಲ್ಲಿ ಅಂತ ನಿರೀಕ್ಷೆಗಳೇನೂ ಇಲ್ಲ. ಗಮನವಿಟ್ಟು ಕೇಳಿ. ಮುಂದಿನ ತಲೆಮಾರನ್ನು ಸೃಷ್ಟಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಯುವಕರು ಒಂದು ಮಗುವಿನ ಬಳಿಕ ಮಗುವಿನ ಬಯಕೆಯನ್ನು ಕೊನೆಗೊಳಿಸುತ್ತಾರೆ. ಇದು ತುಂಬಾ ಸಮಸ್ಯೆಯನ್ನು ಒಡ್ದುತ್ತಿದೆ. ನಾಲ್ಕು ಮಕ್ಕಳಾದರೂ ನಿಮಗೆ ಬೇಕು ಎಂದು ಅವರು ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj