ಮುಸ್ಲಿಂ ಹೆಸ್ರು ಇರುವ 11 ಗ್ರಾಮಗಳ ಹೆಸ್ರು ಬದಲಾಯಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧಾರ

ಹನ್ನೊಂದು ಗ್ರಾಮಗಳ ಹೆಸರನ್ನು ಬದಲಿಸಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ ಮುಸ್ಲಿಂ ಹೆಸರುಗಳನ್ನು ಪ್ರತಿನಿಧಿಸುತ್ತಿರುವ ಈ ಎಲ್ಲಾ ಗ್ರಾಮಗಳ ಹೆಸರನ್ನು ಬದಲಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಈ ಪ್ರಕಾರ ಮೊಹಮ್ಮದ್ ಪುರ್ ಮೋಹನ್ ಪುರ್ ಆಗಲಿದೆ. ಮೊಹಮ್ಮದ್ಪುರ್ ಪವಾಡಿಯ ಎಂಬ ಪ್ರದೇಶವು ರಾಂಪುರ್ ಪವಾಡಿಯ ಎಂದು ಬದಲಾಗಲಿದೆ. ಖಜೂರಿ ಅಲಹಾಬಾದ್ ಇನ್ನು ಮುಂದೆ ಖಜೂರಿ ರಾಮ್ ಆಗಿ ಬದಲಾವಣೆಯಾಗಲಿದೆ. ಹಾಜಿಪುರನ್ನು ಹಿರಾಪುರ್ ಎಂದು ಬದಲಿಸಲಾಗುವುದು. ನಿಪಾನೀಯ ಹಿಜಾಮುದ್ದೀನ್ ಎಂಬ ಪ್ರದೇಶವು ನಿಪಾನಿಯ ದೇವ್ ಆಗಿ ಬದಲಾಗಲಿದೆ. ರಿಚಾಡಿ ಮುರಾದಾ ಬಾದನ್ನು ರಿಚಾಡಿ ಎಂದು ಬದಲಿಸಲಾಗುವುದು. ಕಾಲಿಪುರ್ ಅನ್ನು ರಾಮ್ ಪುರ ಎಂದು ಬದಲಿಸಲಾಗುವುದು. ಗಟ್ಟಿ ಮುಕ್ತಿಯಾರ್ ಪುರ್ ಎಂಬ ಪ್ರದೇಶವನ್ನು ಗಟ್ಟಿ ಎಂದು ಬದಲಿಸಲಾಗುವುದು ಎಂದು ತಿಳಿಸಲಾಗಿದೆ.
ಇದೀಗ ಗ್ರಾಮ ಮತ್ತು ನಗರವು ಸ್ಥಳೀಯ ಜನರ ಭಾವನೆಗಳನ್ನು ಪ್ರತಿನಿಧಿಸುವ ಹೆಸರನ್ನು ಹೊಂದಿದೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ ಮುಖ್ಯಮಂತ್ರಿ ಅವರು ಜನರೊಂದಿಗೆ ಈ ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj