ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ನುಗ್ಗಿದ ಚಿರತೆ!
ಶಿರಸಿ: ಉತ್ತರ ಕನ್ನಡ ಬಿಜೆಪಿ ಸಂಸದ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿಯ ನಿವಾಸಕ್ಕೆ ತಡರಾತ್ರಿ ಚಿರತೆಯೊಂದು ನುಗ್ಗಿದ ಘಟನೆ ನಡೆದಿದೆ.
ಸಂಸದರು ನಿವಾಸದಲ್ಲಿ ಇರುವ ವೇಳೆಯೇ ಈ ಘಟನೆ ನಡೆದಿದ್ದು, ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಆಹಾರ ಅರಸಿಕೊಂಡು ಬಂದ ಚಿರತೆ ಕಾಗೇರಿ ಅವರ ನಿವಾಸದ ಕಂಪೌಂಡ್ ಒಳಗೆ ನುಗ್ಗಿದೆ.
ಕಂಪೌಂಡ್ ಒಳಗೆ ನುಗ್ಗಿದ ಚಿರತೆ ಸಾಕು ನಾಯಿಯನ್ನು ಅಟ್ಟಾಡಿಸಿದೆ. ಆದರೆ, ನಾಯಿ ಚಿರತೆಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದೆ. ತೋಟದ ಕಡೆಯಿಂದ ಚಿರತೆ ಮನೆಯ ಆವರಣಕ್ಕೆ ಪ್ರವೇಶಿಸಿತ್ತು.
ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಓಡಾಟ ಮಾಮೂಲಿ ಎಂಬಂತಾಗಿದೆ. ವಾರದ ಹಿಂದೆ ಕೂಡ ಶಿರಸಿ ಹೊರವಲಯದಲ್ಲಿ ಚಿರತೆ ದನಕರುಗಳ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: