ಮುಸ್ಲಿಂ ದ್ವೇಷಿ ಸಚಿವನ ವಿರುದ್ಧ ಕೇಂದ್ರ ಸಚಿವ ಗರಂ: ‘ಮುಸ್ಲಿಮರು ನಮ್ಮವರು’ ಎಂದ ರಾಮ್‌ದಾಸ್
ಮುಸ್ಲಿಮರ ವಿರುದ್ಧ ಪದೇಪದೇ ದ್ವೇಷ ಭಾಷಣ ಮಾಡುತ್ತಿರುವ ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ವಿರುದ್ಧ ಕೇಂದ್ರ ಸಚಿವರೇ ಹರಿಹಾಯ್ದಿದ್ದಾರೆ. ಮುಸ್ಲಿಮರು ನಮ್ಮವರು, ಈದೇಶ ಸಂವಿಧಾನವನ್ನು ಅನುಸರಿಸಿ ನಡೆಯಬೇಕಾಗಿದೆ. ಮುಸ್ಲಿಮರನ್ನು ನಿರಂತರ ದ್ವೇಷಿಸುವುದನ್ನು ನಿಲ್ಲಿಸಬೇಕಾಗಿದೆ ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಆಗ್ರಹಿಸಿದ್ದಾರೆ.
ಚುನಾವಣೆಯನ್ನು ಗೆಲ್ಲುವುದಕ್ಕೆ ನಮಗೆ ಮುಸ್ಲಿಮರ ಓಟಿನ ಅಗತ್ಯವಿಲ್ಲ. ಈವಿಎಂ ಎಂದರೆ ಎವ್ರಿ ಓಟ್ ಎಗೈನೆಸ್ಟ್ ಮುಲ್ಲಾ ಎಂದು ಈ ನಿತೀಶ್ ರಾಣೆ ದಿನದ ಹಿಂದೆ ಹೇಳಿದ್ದರು. ಹಿಂದುಗಳು ಒಗ್ಗಟ್ಟಾಗಿ ಹಿಂದುಗಳಿಗೆ ಮತದಾನ ಮಾಡುತ್ತಿರುವುದರಿಂದಲೇ ವಿರೋಧಿಗಳು ಇವಿಎಂ ಅನ್ನು ಪ್ರಶ್ನಿಸುತ್ತಿದ್ದಾರೆ ಎಂದವರು ಈ ಸಭೆಯಲ್ಲಿ ಹೇಳಿದ್ದರು. ಮಾತ್ರ ಅಲ್ಲ ಇದಕ್ಕಿಂತ ಮೊದಲು ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj