ಹೀರೋ ಮೋಟೋಕಾರ್ಪ್ ಹೊಸ ಡೆಸ್ಟಿನಿ 125 ಬಿಡುಗಡೆ: ಬೆಲೆ, ಮೈಲೇಜ್ ಎಷ್ಟು? ಏನೇನು ವೈಶಿಷ್ಠ್ಯಗಳಿವೆ?
Hero Destini –125 ವಿಶ್ವದಲ್ಲೇ, ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಹೊಸ ಡೆಸ್ಟಿನಿ 125ನ್ನು ಬಿಡುಗಡೆ ಮಾಡುವ ಮೂಲಕ 125 ಸಿಸಿ ಸ್ಕೂಟರ್ ವಿಭಾಗಕ್ಕೆ ಹೊಸ ಹುರುಪನ್ನು ನೀಡುತ್ತಿದೆ.
ನಗರ ಸಂಚಾರಕ್ಕೆ ಇನ್ನಷ್ಟು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ನ್ಯೂ ಡೆಸ್ಟಿನಿ 125, ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಮೈಲೇಜ್ ಮತ್ತು ಅಚಲ ವಿಶ್ವಾಸಾರ್ಹತೆಗಳನ್ನು ಹೊಂದಿದೆ. ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆ ಎರಡೂ ಇದರಲ್ಲಿ ಅತ್ಯುತ್ತಮವಾಗಿ ಮೇಳೈಸಿವೆ. ದೈನಂದಿನ ನಗರ ಸಂಚಾರಗಳಿಗೆ ಇದು ಹೊಸ ಮಾನದಂಡವನ್ನು ರೂಪಿಸುತ್ತದೆ ಮತ್ತು ಸವಾರರ ನಿರೀಕ್ಷೆಗಳನ್ನು ಮೀರಿಸುವಂತಿದೆ.
ಹೊಸ ಹೀರೋ ಡೆಸ್ಟಿನಿ 125 ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ:
* ಡೆಸ್ಟಿನಿ 125 VX – ರೂ.80,450
* ಡೆಸ್ಟಿನಿ 125 ZX – ರೂ. 89,300
* ಡೆಸ್ಟಿನಿ 125 ZX+ – ರೂ. 90,300
(ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್–ಶೋರೂಮ್ ಬೆಲೆ)
30 ಪೇಟೆಂಟ್ ಅರ್ಜಿಗಳು ಮತ್ತು ಸುಧಾರಿತ ರೈಡರ್ ಅನುಕೂಲತೆ ಮತ್ತು ಸುರಕ್ಷತೆಗಾಗಿ ಪ್ರಕಾಶಿತ ಸ್ಟಾರ್ಟ್ ಸ್ವಿಚ್ ಮತ್ತು ಆಟೋ-ಕ್ಯಾನ್ಸಲ್ ವಿಂಕರ್‌ಗಳಂತಹ ಉದ್ಯಮದಲ್ಲೇ ಮೊದಲ ವೈಶಿಷ್ಟ್ಯಗಳಿರುವ ಹೊಸ ಡೆಸ್ಟಿನಿ 125, ಹೀರೋ ಮೋಟೋಕಾರ್ಪ್‌ಗೆ ನಾವೀನ್ಯತೆಯ ಕುರಿತಂತೆ ಇರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಹೊಸ ಡೆಸ್ಟಿನಿ 125, ಕುಟುಂಬಗಳಿಗೆ ಸೂಕ್ತ ಆಯ್ಕೆಯಾಗಿದ್ದು, 59 ಕಿಮೀ/ಲೀಟರ್‌ನ ವಿಭಾಗದಲ್ಲಿ ಅತೀ ಹೆಚ್ಚಿನ ಮೈಲೇಜ್, ಆರಾಮವಾಗಿ ಕಾಲಿಡಲು ಸ್ಥಳ ಮತ್ತು ವಿಶಾಲವಾದ ಫ್ಲೋರ್‌ಬೋರ್ಡ್ ಗಳನ್ನು ಹೊಂದಿದೆ. ಡೆಸ್ಟಿನಿ 125 ಉದ್ದವಾದ ಸೀಟನ್ನು ಹೊಂದಿದ್ದು ಸವಾರರಿಗೆ ಆರಾಮದಾಯಕ ಮತ್ತು ದಕ್ಷತಾಶಾಸ್ತ್ರದ ಅತ್ಯುತ್ತಮ ಅನುಭವವನ್ನು ನೀಡುತ್ತದೆ.
ಸ್ಮಾರ್ಟ್, ಸುಗಮ ಮತ್ತು ಮಿತ ವ್ಯಯದಲ್ಲಿ ಓಡಾಡಲು ವಿನ್ಯಾಸಗೊಳಿಸಲಾದ ಈ ಸ್ಕೂಟರ್, ಹೊಸ ಡಿಜಿಟಲ್ ಸ್ಪೀಡೋಮೀಟರ್, 190ಮಿಮೀ ಫ್ರಂಟ್ ಡಿಸ್ಕ್ ಬ್ರೇಕ್, ನವೀಕರಿಸಿದ 12/12 ಪ್ಲಾಟ್‌ಫಾರ್ಮ್ ಮತ್ತು ಅಗಲವಾದ ಹಿಂಬದಿ ಚಕ್ರವನ್ನು ಹೊಂದಿದೆ. ದಕ್ಷತೆ ಹೆಚ್ಚಿಸಲು ಹೀರೋನ ನವೀನ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಬಹಳ ಆಲೋಚಿಸಿ ವಿನ್ಯಾಸಗೊಳಿಸಲಾದ ಸೀಟ್ ಬ್ಯಾಕ್‌ರೆಸ್ಟ್, ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ.
ಈ ಹೊಸ ಸ್ಕೂಟರಿನ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಹೀರೋ ಮೋಟೋಕಾರ್ಪ್‌ನ ಭಾರತ ವ್ಯವಹಾರ ಘಟಕದ ಮುಖ್ಯ ವ್ಯವಹಾರ ಅಧಿಕಾರಿ ರಂಜಿವ್‌ಜಿತ್ ಸಿಂಗ್, “ಆಧುನಿಕ ಸವಾರರಿಗಾಗಿ ವಿನ್ಯಾಸಗೊಳಿಸಲಾದ ಶೈಲಿ, ಅನುಕೂಲತೆ ಮತ್ತು ಸುಧಾರಿತ ತಂತ್ರಜ್ಞಾನಗಳ ಸಂಕೇತವಾದ ಹೊಸ ಹೀರೋ ಡೆಸ್ಟಿನಿ 125 ನ್ನು ಪರಿಚಯಿಸಲು ನಮಗೆ ರೋಮಾಂಚನವಾಗುತ್ತಿದೆ. ಈ ನವೀನ 125 ಸಿಸಿ ಸ್ಕೂಟರ್, ಉದ್ಯಮದ ಮಾನದಂಡಗಳನ್ನು ಮರು-ವ್ಯಾಖ್ಯಾನಿಸುತ್ತದೆ ಮತ್ತು ಹೀರೋ ಮೋಟೋಕಾರ್ಪ್‌ನ ಅಗ್ರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. 59 ಕಿಮೀ/ಲೀಟರ್‌ನ, ತನ್ನ ವಿಭಾಗದಲ್ಲೆ ಅತೀ ಹೆಚ್ಚಿನ ಮೈಲೇಜ್‌ನೊಂದಿಗೆ, ಈ ಕುಟುಂಬ ಸ್ನೇಹಿ ಸ್ಕೂಟರ್ ಕಂಪನಿಗೆ ನಾವೀನ್ಯತೆ, ಮೌಲ್ಯ ಮತ್ತು ಸಾಟಿಯಿಲ್ಲದ ಸವಾರಿ ಅನುಭವ ನೀಡುವ ಕುರಿತಂತೆ ಇರುವ ಬದ್ಧತೆಯನ್ನು ತೋರಿಸುತ್ತದೆ.
ಹೊಸ ಡೆಸ್ಟಿನಿ 125:
ಮೈಲೇಜ್ ಮತ್ತು ಕಾರ್ಯಕ್ಷಮತೆಯಲ್ಲಿ ಮುಂಚೂಣಿಯಲ್ಲಿದೆ. ಹೊಸ ಹೀರೋ ಡೆಸ್ಟಿನಿ 125 ರಲ್ಲಿ ಸಂಸ್ಕರಿಸಿದ ಮತ್ತು ಪರಿಣಾಮಕಾರಿ 125cc ಇಂಜಿನ್ ಇದ್ದು, 7000 rpm ನಲ್ಲಿ 9bhp ಮತ್ತು 5500rpm ನಲ್ಲಿ 10.4 nm ನ ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. i3S ತಂತ್ರಜ್ಞಾನ ಮತ್ತು ಒನ್-ವೇ ಕ್ಲಚ್‌ನೊಂದಿಗೆ, ವೇಗವರ್ಧನೆ ಬಹಳ ಚುರುಕಾಗಿ ಆಗುತ್ತದೆ ಜೊತೆಗೆ ನ ಅತ್ಯುತ್ತಮ ಮೈಲೇಜ್ 59 ಕಿಮೀ/ಲೀ.
ಅಸಾಧಾರಣ ಅನುಕೂಲತೆ:
ನವೀನ ವೈಶಿಷ್ಟ್ಯಗಳಿರುವ ಡೆಸ್ಟಿನಿ 125 ಕ್ರಿಯಾತ್ಮಕತೆ ಮತ್ತು ತಂತ್ರಜ್ಞಾನಗಳ ಪರಿಪೂರ್ಣ ಮಿಶ್ರಣವಾಗಿದ್ದು ಆಧುನಿಕ ಸವಾರಿ ಅಗತ್ಯತೆಗಳಿಗೆ ತಕ್ಕಂತಿದೆ.
ಕಾಲಿಡಲು ಆರಾಮವಾಗಿರುವಷ್ಟು ಸ್ಥಳವಿರುವುದರಿಂದ ದೂರ ಪ್ರಯಾಣದ ಸಮಯದಲ್ಲಿಯೂ ಸಹ ಆರಾಮವಾಗಿರುತ್ತದೆ. ಮುಂಭಾಗದ ಕೈಗವಸು ಪೆಟ್ಟಿಗೆಯಲ್ಲಿ ಅಗತ್ಯ ವಸ್ತುಗಳನ್ನು ಆರಾಮವಾಗಿ ಇಟ್ಟುಕೊಳ್ಳಬಹುದು. ಲಗೇಜ್ ಬಾಕ್ಸ್ ನಲ್ಲಿರುವ ಬೂಟ್ ಲ್ಯಾಂಪ್, ಗೋಚರತೆಯನ್ನು ಹೆಚ್ಚಿಸುವುದರಿಂದ ಮಂದ-ಬೆಳಕಿದ್ದಾಗ ವಸ್ತುಗಳನ್ನು ನಿರ್ವಹಿಸಲು ಅನುಕೂಲಕರವಾಗುತ್ತದೆ. ಆಧುನಿಕತೆಯ ಸ್ಪರ್ಶಕ್ಕಾಗಿ ಸ್ಕೂಟರ್ ತಾನಾಗೇ ಆಫ್ ಆಗುವ ವಿಂಕರ್‌ಗಳನ್ನು ಹೊಂದಿದ್ದು ಒಂದು ತಿರುವಿನ ನಂತರ ಇಂಡಿಕೇಟರುಗಳು ತಾವಾಗಿಯೇ ಆಫ್ ಆಗುತ್ತವೆ. ಇದರ ಉದ್ದೇಶ, ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುವುದಾಗಿದ್ದು, ಇದು ಈ ವರ್ಗದಲ್ಲೇ ಮೊದಲ ಬಾರಿಗೆ ಪರಿಚಯವಾಗುತ್ತಿದೆ.
ಬ್ಲೂಟೂತ್ ಸಂಪರ್ಕವಿರುವ ಸುಧಾರಿತ ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇಸಿಒ ಸೂಚಕ, ನೈಜ-ಸಮಯದ ಮೈಲೇಜ್ ಪ್ರದರ್ಶನ (ಆರ್.ಟಿ.ಎಂ.ಐ), ಇಂಧನ ಇನ್ನೂ ಎಷ್ಟು ದೂರಕ್ಕೆ ಸಾಲುತ್ತದೆ ಮತ್ತು ಕಡಿಮೆ ಇಂಧನ ಸೂಚಕ ಸೇರಿದಂತೆ ಹಲವಾರು ಸ್ಮಾರ್ಟ್‌ಫೋನ್-ಹೊಂದಾಣಿಕೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಮಿಸ್ಡ್ ಕಾಲ್‌ಗಳು, ಸಂದೇಶಗಳು ಮತ್ತು ಒಳಬರುವ ಕರೆಗಳ ಎಚ್ಚರಿಕೆಗಳೊಂದಿಗೆ, ಈ ಹೊಸ ಡ್ಯಾಶ್‌ಬೋರ್ಡ್, ಸವಾರರಿಗೆ ಸದಾ ಸಂಪರ್ಕದಲ್ಲಿರಲು ಮತ್ತು ನೈಜ-ಸಮಯದ ನಿರ್ದೇಶನಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
ಸಾಟಿಯಿಲ್ಲದ ಕಂಫರ್ಟ್:
ಹೀರೋ ಡೆಸ್ಟಿನಿ 125 ನಿಮ್ಮ ಕುಟುಂಬಕ್ಕೆ ಒಂದು ಪರಿಪೂರ್ಣ ಒಡನಾಡಿಯಾಗಿದ್ದು, ನಿಮಗೆ ಹೆಚ್ಚಿನ ಸೌಕರ್ಯ ದೊರೆಯುವಂತೆ ವಿನ್ಯಾಸಗೊಳಿಸಲಾಗಿದೆ. ಅದರ ಉದ್ದವಾದ, ಮೆತ್ತನೆಯ ಸೀಟು ಮತ್ತು ಪ್ಯಾಡೆಡ್ ಪಿಲಿಯನ್ ಇರುವುದರಿಂದ ಸವಾರ ಮತ್ತು ಪ್ರಯಾಣಿಕ ಇಬ್ಬರಿಗೂ ಆರಾಮದ ಅನುಭವವಾಗುತ್ತದೆ. ವಿಶಾಲವಾದ ಲೆಗ್‌ರೂಮ್ ಮತ್ತು ವಿಶಾಲವಾದ ಫ್ಲೋರ್‌ಬೋರ್ಡ್, ಕುಟುಂಬ ಸಮೇತ ಸಂಚಾರ ಮಾಡಲು ಹೆಚ್ಚು ಅನುಕೂಲಕರವಾಗಿಸುತ್ತವೆ.
ಮುಂಭಾಗದಲ್ಲಿರುವ ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಈ ವರ್ಗದಲ್ಲೆ ಮೊದಲ ಬಾರಿಗೆ ಎನ್ನುವಂತಹ ಪ್ರಕಾಶಮಾನವಾದ ಸ್ಟಾರ್ಟ್ ಸ್ವಿಚ್, ನಿಮಗೆ ಸಂಪರ್ಕ ಒದಗಿಸುತ್ತದೆ ಮತ್ತು ಪ್ರಯಾಣದಲ್ಲಿ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹಿಂದಿನ ಅಗಲವಾದ
ಚಕ್ರದೊಂದಿಗೆ ನವೀಕರಿಸಿದ ದೊಡ್ಡ 12/12 ಪ್ಲಾಟ್‌ಫಾರ್ಮ್, ಸ್ಥಿರತೆ ಮತ್ತು ಸುರಕ್ಷತೆಗಳನ್ನು ಹೆಚ್ಚಿಸುತ್ತದೆ, ಪ್ರತಿ ಪ್ರಯಾಣವನ್ನು ಸುಗಮ ಮತ್ತು ಹೆಚ್ಚು ಸುರಕ್ಷಿತವಾಗಿಸುತ್ತದೆ. ನಿತ್ಯದ ಪ್ರಯಾಣವಾಗಲಿ ಅಥವಾ ಕುಟುಂಬ ಸಹಿತವಾದ ವಿಹಾರವಾಗಲಿ, ಹೀರೋ ಡೆಸ್ಟಿನಿ 125 ಸಾಟಿಯಿಲ್ಲದ ಸೌಕರ್ಯ ಮತ್ತು ವಿಶ್ವಾಸಾರ್ಹತೆಗಳನ್ನು ಒದಗಿಸುತ್ತದೆ.
ಹೆಚ್ಚಿನ ಸುರಕ್ಷತೆ:
ಸುಧಾರಿತ ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳಿದ್ದು ಉತ್ತಮ ಗೋಚರತೆಯನ್ನು ಖಚಿತಪಡಿಸುತ್ತವೆ, ರಾತ್ರಿ ಪ್ರಯಾಣದ ಸಮಯದಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತವೆ. 190mm ಮುಂಭಾಗದ ಡಿಸ್ಕ್ ಬ್ರೇಕ್ ವಿಶ್ವಾಸಾರ್ಹ ಬ್ರೇಕಿಂಗ್ ಶಕ್ತಿಯನ್ನು ಒದಗಿಸುತ್ತದೆ. ಇದರ 12/12-ಚಕ್ರ ಗಾತ್ರವು ಸ್ಥಿರತೆ ಮತ್ತು ನಿಯಂತ್ರಣವನ್ನು ನೀಡುತ್ತಿದ್ದು ನಗರದೊಳಗಿನ ಸಂಚಾರ ಮತ್ತು ವಿಹಾರಗಳಿಗೆ ಸೂಕ್ತವಾಗಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಡೆಸ್ಟಿನಿ 125 ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಗಳ ಸಂಗಮವಾಗಿದೆ. ಇದು ನಿಜಕ್ಕೂ ಪ್ರತಿಯೊಂದರಲ್ಲೂ ಅಗ್ರ ಸ್ಥಾನದಲ್ಲಿರುವ ಸ್ಕೂಟರ್ ಆಗಿದೆ.
ಪ್ರೀಮಿಯಂ ಶೈಲಿ:
ಇದರ ನಿಯೋ-ರೆಟ್ರೊ ವಿನ್ಯಾಸ ಕಾಲಾತೀತ ಮೋಡಿಯನ್ನು ಮಾಡುತ್ತದೆ, ಎಲ್.ಇ.ಡಿ. ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಪ್ರೀಮಿಯಂ ಸ್ಪರ್ಶವನ್ನು ನೀಡುವ ತಾಮ್ರ-ಬೆರೆತ ಕ್ರೋಮ್ ಅಂಶಗಳಿಂದ ಕೂಡಿದೆ. ಡೈಮಂಡ್-ಕಟ್ ಅಲಾಯ್ ಚಕ್ರಗಳು ಅದರ ನಯವಾದ ಆಕರ್ಷಣೆಯನ್ನು ಹೆಚ್ಚಿಸುತ್ತವೆ; ಸಿಗ್ನೇಚರ್ H ಆಕಾರದ ಎಲ್.ಇ.ಡಿ. ಟೇಲ್ ಲ್ಯಾಂಪ್‌ಗಳು ಎಲ್ಲದರ ನಡುವೆಯೂ ಎದ್ದು ಕಾಣುವಂತೆ ಮಾಡುತ್ತವೆ. ವಿಶಿಷ್ಟ ಬ್ಯಾಡ್ಜಿಂಗ್ ಇರುವ ಪ್ರೀಮಿಯಂ ಒಳಾಂಗಣಗಳು ಐಷಾರಾಮಿ ಸವಾರಿ ಅನುಭವವನ್ನು ಒದಗಿಸುತ್ತವೆ. ಪ್ರತಿ ಕುಟುಂಬದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೀರೋ ಡೆಸ್ಟಿನಿ 125 ಒಂದು ಸ್ಟೈಲಿಶ್ ಪ್ಯಾಕೇಜ್‌ನಲ್ಲಿ ಸೊಬಗು ಮತ್ತು ಪ್ರಾಯೋಗಿಕತೆಗಳ ಸಮ್ಮೇಳವಾಗಿದೆ.
ಟೈಮ್ ಲೆಸ್ ಬಣ್ಣಗಳು:
ಹೊಸ ಡೆಸ್ಟಿನಿ 125 ಐದು ವಿಶೇಷ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. VX ಕ್ಯಾಸ್ಟ್ ಡ್ರಮ್ ಎಟರ್ನಲ್ ವೈಟ್, ರೀಗಲ್ ಬ್ಲ್ಯಾಕ್ ಮತ್ತು ಗ್ರೂವಿ ರೆಡ್‌ನಲ್ಲಿ ಲಭ್ಯವಿದೆ. ಕಾಸ್ಟ್ ಡಿಸ್ಕ್ ZX ಕಾಸ್ಮಿಕ್ ಬ್ಲೂ ಮತ್ತು ಮಿಸ್ಟಿಕ್ ಮೆಜೆಂಟಾದಲ್ಲಿ ಲಭ್ಯವಿದೆ; ಕ್ಯಾಸ್ಟ್ ಡಿಸ್ಕ್ ZX+ ತಾಮ್ರ ಕ್ರೋಮ್ ಅಸೆಂಟ್‌ಗಳೊಂದಿಗೆ ಎಟರ್ನಲ್ ವೈಟ್ ಮತ್ತು ರೀಗಲ್ ಬ್ಲ್ಯಾಕ್ ನೋಟವನ್ನು ನೀಡುತ್ತದೆ.
ವಿವರಗಳು:
- ಡೆಸ್ಟಿನಿ 125 VX
- ಡೆಸ್ಟಿನಿ 125 ZX
- ಡೆಸ್ಟಿನಿ 125 ZX+
- ಚಕ್ರದ ಬಗೆ
- ಕಾಸ್ಟ್ ಡ್ರಮ್
- ಕಾಸ್ಟ್ ಡಿಸ್ಕ್
- ಕಾಸ್ಟ್ ಡಿಸ್ಕ್
- ಸ್ಪೀಡೋ ಮೀಟರ್
- ಡಿಜಿ ಅನಲಾಗ್
- ಪೂರ್ತಿ ಡಿಜಿಟಲ್
- ಪೂರ್ತಿ ಡಿಜಿಟಲ್
ಲಕ್ಷಣಗಳು:
- ಕಾಲಿಡಲು ಯಥೇಚ್ಛ ಸ್ಥಳಾವಕಾಶ
- ಫ್ರಂಟ್ ಗ್ಲೌವ್ ಬಾಕ್ಸ್
- ಬೂಟ್ ಲ್ಯಾಂಪ್
- ಕ್ರೋಮ್ ಆಕ್ಸೆಂಟ್ಸ್
- ಬ್ಲೂಟೂತ್ ಕನೆಕ್ಟಿವಿಟಿ ಸಹಿತವಾದ ಡಿಜಿಟಲ್ ಸ್ಪೀಡೋಮೀಟರ್
ಟೋ–ಕ್ಯಾನ್ಸಲ್ ವಿಂಕರ್ಸ್; ಡೈಮಂಡ್-ಕಟ್ ಅಲಾಯ್ ವೀಲ್ಸ್
- ಪ್ರಕಾಶಮಾನವಾದ ಸ್ಟಾರ್ಟ್ ಸ್ವಿಚ್
- ಕ್ರೋಮ್ ಆಕ್ಸೆಂಟ್ಸ್
- VX ನ ಎಲ್ಲ ವೈಶಿಷ್ಟ್ಯಗಳು
- ಕಾಪರ್ ಕ್ರೋಮ್ ಆಕ್ಸೆಂಟ್ಸ್
- ಮೆತ್ತನೆಯ ಸೀಟ್ ಬ್ಯಾಕ್-ರೆಸ್ಟ್
- ಟರ್ನ್-ಬೈ-ಟರ್ನ್ ನ್ಯಾವಿಗೇಶನ್
- ZX ನ ಎಲ್ಲ ವೈಶಿಷ್ಟ್ಯಗಳು
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: