ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಡಲು ‘ಬಿಳಿ ಟೀ ಶರ್ಟ್ ಚಳವಳಿ’ ಆರಂಭಿಸಿದ ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನಸಾಮಾನ್ಯರ ಹಕ್ಕುಗಳಿಗಾಗಿ ‘ಬಿಳಿ ಟಿ-ಶರ್ಟ್ ಚಳವಳಿ’ ಪ್ರಾರಂಭಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.
ಇವರು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಈ ಘೋಷಣೆ ಮಾಡಿದ್ದು ಇದರ ಭಾಗವಾಗಲು ಜನರನ್ನು ಮನವಿ ಮಾಡಿದ್ದಾರೆ.
ನೀವು ಆರ್ಥಿಕ ನ್ಯಾಯದಲ್ಲಿ ನಂಬಿಕೆ ಹೊಂದಿದ್ದರೆ, ಹೆಚ್ಚುತ್ತಿರುವ ಸಂಪತ್ತಿನ ಅಸಮಾನತೆಯನ್ನು ವಿರೋಧಿಸಿ, ಸಾಮಾಜಿಕ ಸಮಾನತೆಗಾಗಿ ಹೋರಾಡಿ. ಅಲ್ಲದೇ ಎಲ್ಲಾ ರೀತಿಯ ತಾರತಮ್ಯವನ್ನು ತಿರಸ್ಕರಿಸಿ, ನಮ್ಮ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಶ್ರಮಿಸಿದರೆ, ನಿಮ್ಮ ಬಿಳಿ ಟೀ ಶರ್ಟ್ ಗಳನ್ನು ಧರಿಸಿ ಆಂದೋಲನಕ್ಕೆ ಸೇರಿಕೊಳ್ಳಿ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ ವೀಡಿಯೊನಲ್ಲಿ ಹೇಳಲಾಗಿದೆ.
“ಇಂದು ಮೋದಿ ಸರ್ಕಾರವು ಬಡವರು ಮತ್ತು ಕಾರ್ಮಿಕ ವರ್ಗದ ಬಗ್ಗೆ ಬೆನ್ನು ತಿರುಗಿಸಿದೆ. ಸರ್ಕಾರದ ಸಂಪೂರ್ಣ ಗಮನವು ಆಯ್ದ ಕೆಲವು ಬಂಡವಾಳಶಾಹಿಗಳನ್ನು ಶ್ರೀಮಂತಗೊಳಿಸುವುದರ ಮೇಲಿದೆ” ಎಂದು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj