ನಟ ದುನಿಯಾ ವಿಜಯ್—ಲೂಸ್ ಮಾದ ನಡುವೆ ಕಿರಿಕ್ ಆಗಿದ್ದು ನಿಜವೇ?
ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಲೂಸ್ ಮಾದ ಯೋಗೇಶ್ ನಡುವೆ ವೈಮನಸ್ಸು ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಕೇಳಿ ಬಂದಿತ್ತು, ಇದೀಗ ಈ ಬಗ್ಗೆ ಲೂಸ್ ಮಾದ ಯೋಗೇಶ್ ಸ್ಪಷ್ಟನೆ ನೀಡಿದ್ದಾರೆ.
ಸಿದ್ಲಿಂಗು –2 ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿದ ಯೋಗೇಶ್ ದುನಿಯಾ ವಿಜಯ್ ಹಾಗೂ ನನಗೆ ಕಿರಿಕ್ ಆಗಿದ್ದು ನಿಜ, ಆದರೆ ಈಗ ಚೆನ್ನಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ದುನಿಯಾ ಸಿನಿಮಾದ ನಂತರ ನಾವಿಬ್ಬರು ಒಟ್ಟಿಗೆ ನಟಿಸಿಲ್ಲ, ಭೀಮಾ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಆದರೆ ಎಲ್ಲೋ ಮಿಸ್ ಹೊಡಿಯಿತು. ಕೂಡಿ ಬರಲಿಲ್ಲ, ಸದ್ಯಕ್ಕೆ ವಿಜಯ್ ಹಾಗೂ ನನ್ನ ಫ್ರೆಂಡ್ ಶಿಪ್ ಚೆನ್ನಾಗಿದೆ, ಎರಡೂ ಫ್ಯಾಮಿಲಿಯವರು ಚೆನ್ನಾಗಿದ್ದೇವೆ. ಮುಂದೆ ಪಾತ್ರ ಕೂಡಿ ಬಂದರೆ ಇಬ್ಬರೂ ಸಿನಿಮಾ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂದ ಹಾಗೆ ವಿಜಯ್ ಹಾಗೂ ಲೂಸ್ ಮಾದ ಇಬ್ಬರೂ ಸಂಬಂಧಿಕರಂತೆ, ಲೂಸ್ ಮಾದ ದುನಿಯಾ ವಿಜಯ್ ಅವರ ಅಕ್ಕನ ಮಗ ಆಗಬೇಕಂತೆ, ದುನಿಯಾ ಸಿನಿಮಾ ನಂತರ ದೂರವಾಗಿದ್ದ ಈ ನಟರು ಆದಷ್ಟು ಬೇಗ ಒಂದಾಗಿ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7