ಸಂತ್ರಸ್ತೆ ಪತ್ತೆಯಾದಾಗ ಆರೋಪಿ ರಮೇಶ್ ಜಾರಕಿಹೊಳಿ ನಾಪತ್ತೆ!
ಬೆಂಗಳೂರು: ಮಾಧ್ಯಮಗಳಲ್ಲಿ ಸಿಡಿ ಲೇಡಿ ಇಂದು ಪತ್ತೆಯಾಗುತ್ತಾರಾ? ನಾಳೆ ಪತ್ತೆಯಾಗುತ್ತಾರಾ ಎಂದು ಪ್ರಶ್ನಿಸುತ್ತಿದ್ದರು. ಈ ನಡುವೆ ಸಂತ್ರಸ್ತ ಯುವತಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೀಗ ಸಂತ್ರಸ್ತ ಯುವತಿ ಪತ್ತೆಯಾದಾಗ ಆರೋಪಿ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದಾರೆ.
ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನೀಡಿರುವ ಹೇಳಿಕೆ ಇದೀಗ ಆರೋಪಿ ರಮೇಶ್ ಜಾರಕಿಹೊಳಿಯ ಕೈಗೆ ಬೇಡಿ ತೊಡಿಸುವ ಮಟ್ಟಕ್ಕೆ ಸ್ಟ್ರಾಂಗ್ ಆಗಿದ್ದು, ಈ ಕಾರಣದಿಂದಾಗಿ ನಿನ್ನೆ ಕೊಲ್ಹಾಪುರದ ಮಂದಿರವೊಂದಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಕೆಲವು ಮಾಹಿತಿಯ ಪ್ರಕಾರ ರಮೇಶ್ ಜಾರಕಿಹೊಳಿ ಮುಂಬೈಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರು ಸಂತ್ರಸ್ತೆಯ ಹೇಳಿಕೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಅಜ್ಞಾತ ಸ್ಥಳವೊಂದರಲ್ಲಿ ಅಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂತ್ರಸ್ತ ಯುವತಿ ದಾಖಲೆ ಸಹಿತವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾಳೆ. ಇದರಿಂದಾಗಿ ರಮೇಶ್ ಜಾರಕಿಹೊಳಿ ಬಂಧನದ ಭೀತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ಮತ್ತೆ ಯಾವಾಗ ಪತ್ತೆಯಾಗುತ್ತಾರೆ ಎನ್ನುವುದು ತಿಳಿದಿಲ್ಲ.