ದೇಶದ ಅತಿ ಎತ್ತರದ ಧ್ವಜಸ್ತಂಭದಿಂದ ನೆಲಕ್ಕುರುಳಿದ ರಾಷ್ಟ್ರಧ್ವಜ!

ವಿಜಯನಗರ: ಡಾ.ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತಿ ಎತ್ತರದ 405 ಅಡಿ ಧ್ವಜಸ್ತಂಭದಿಂದ ಹಗ್ಗ ತುಂಡಾಗಿ ರಾಷ್ಟ್ರಧ್ವಜ ನೆಲಕ್ಕುರುಳಿದ ಘಟನೆ ನಡೆದಿದೆ.
8:50ಕ್ಕೆ ಸರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಧ್ವಜಾರೋಹಣ ನಡೆಸಿದ್ದರು. ಬಳಿಕ 9 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ, ನಾನಾ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಸುಮಾರು 9:05ರ ವೇಳೆ ಏಕಾಏಕಿ ಹಗ್ಗ ತುಂಡಾಗಿ ರಾಷ್ಟ್ರಧ್ವಜ ನೆಲಕ್ಕುರುಳಿದೆ.
ಈ ವೇಳೆ ಆತಂಕಕ್ಕೊಳಗಾದ ಕ್ರೀಡಾಂಗಣದಲ್ಲಿದ್ದವರು ಹಾಗೂ ಪೊಲೀಸರು ಸ್ಥಳಕ್ಕೆ ಓಡಿ ಬಂದು ಧ್ವಜವನ್ನು ಎತ್ತುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಜಮೀರ್, ಹಗ್ಗ ತುಂಡಾಗಿ ಕೆಳಗೆ ಬಿದ್ದಿದೆ, ಯಾರೂ ಆತಂಕ ಪಡಬೇಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಮ್ಮ ಭಾಷಣದ ಕೊನೆಯಲ್ಲಿ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: