ಮತ್ತೆ ಭಾರತದ ಅತ್ಯಂತ ಕಲುಷಿತ ನಗರವಾಗಿ ಗುರುತಿಸಿಕೊಂಡ ಬೈರ್ನಿಹತ್: ತುರ್ತು ಕ್ರಮಕ್ಕೆ ನಿವಾಸಿಗಳ ಆಗ್ರಹ

ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಬೈರ್ನಿಹತ್ ಪಟ್ಟಣವು ಸತತ ಎರಡನೇ ವರ್ಷ ಭಾರತದ ಅತ್ಯಂತ ಕಲುಷಿತ ನಗರ ಎಂದು ಗುರುತಿಸಲ್ಪಟ್ಟಿದೆ. ಅಪಾಯಕಾರಿ ಗಾಳಿಯ ಗುಣಮಟ್ಟದ ಮಟ್ಟಕ್ಕೆ ಕಾರಣವಾದ ಮಾಲಿನ್ಯವು ಈ ಪ್ರದೇಶದಲ್ಲಿ ವಾಸಿಸುವ ಜನರ ಜೀವನ, ಆರೋಗ್ಯ ಮತ್ತು ಜೀವನೋಪಾಯದ ಮೇಲೆ ಆಳವಾದ ಪರಿಣಾಮ ಬೀರಿದೆ.
ಸ್ಥಳೀಯ ಕಾರ್ಖಾನೆಗಳ ಅನಿಯಂತ್ರಿತ ಕಾರ್ಯಾಚರಣೆಯೇ ಈ ಪರಿಸ್ಥಿತಿಗೆ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ.
“ಈ ಕಾರ್ಖಾನೆಗಳಿಂದ ತುಂಬಾ ಮಾಲಿನ್ಯ, ತುಂಬಾ ಧೂಳಿನಿಂದ ತೊಂದರೆಗೊಳಗಾಗುತ್ತಿದೆ. ನೀವು ಸುತ್ತಲೂ ನೋಡಿದರೆ, ಇಲ್ಲಿ ಹಸಿರು ಮರಗಳಿಲ್ಲ” ಎಂದು ಡಾನ್ ಬಾಸ್ಕೊ ಹೈಯರ್ ಸೆಕೆಂಡರಿ ಶಾಲೆಯ ಫಾದರ್ ಕೆಜೆ ಪೀಟರ್ ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj