10ನೇ ತರಗತಿ ಬಾಲಕಿ ಮೇಲೆ ದೂರದ ಸಂಬಂಧಿಯಿಂದ ಅತ್ಯಾಚಾರ: ನಂಬಿ ಮೋಸಹೋಗಿ ಕಣ್ಣೀರು ಹಾಕುತ್ತಿದ್ದಾರೆ ಪೋಷಕರು!

ಚಿಕ್ಕಮಗಳೂರು: ದೂರದ ಸಂಬಂಧಿಯೊಬ್ಬ ಮಾಡಿದ ಮನೆಮುರುಕರ ಕೆಲಸದಿಂದಾಗಿ ಬಾಲಕಿಯ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. 10ನೇ ತರಗತಿಯ ವಿದ್ಯಾರ್ಥಿನಿಯನ್ನು ದೂರದ ಸಂಬಂಧಿಯೊಬ್ಬ ಅತ್ಯಾಚಾರ ನಡೆಸಿದ್ದು, ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ.
ಚಿಕ್ಕಮಗಳೂರು ನಗರದ ಬಡಾವಣೆಯೊಂದರಲ್ಲಿ ಈ ಘಟನೆ ನಡೆದಿದೆ. 54 ವರ್ಷದ ಇಲಿಯಾಸ್ ಎಂಬ ವ್ಯಕ್ತಿ ತನ್ನ ದೂರದ ಸಂಬಂಧಿಗಳ ಮಗಳ ಮೇಲೆ ಅನಾಚಾರ ಎಸಗಿದ್ದಾನೆ. ನೊಂದ ಬಾಲಕಿಯನ್ನು ಮಗಳ ರೀತಿಯಾಗಿ ನೋಡುತ್ತೇನೆ ಎಂದಿದ್ದ ವ್ಯಕ್ತಿಯೇ ಈ ದುಷ್ಕೃತ್ಯ ಎಸಗಿದ್ದಾನೆ.
ಪೋಷಕರು ದೂರದ ಸಂಬಂಧಿ ಎಂಬ ಗೌರವದಿಂದ ನೋಡಿದರೆ ಕಾಮುಕ ಇಲಿಯಾಸ್, ಬಾಲಕಿಯ ಅಪ್ಪ–ಅಮ್ಮ ಕೂಲಿಗೆ ಹೋದಾಗ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಈ ವಿಚಾರ ಯಾರಿಗಾದ್ರು ಹೇಳಿದ್ರೆ ಅಪ್ಪ–ಅಮ್ಮನನ್ನ ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದ. ಈ ಘಟನೆಗೆ ಸಂಬಂಧಿಸಿದಂತೆ ನೊಂದ ಬಾಲಕಿಯ ಅಪ್ಪ—ಅಮ್ಮ ಆರೋಪಿ ಇಲಿಯಾಸ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
54 ವರ್ಷದ ಇಲಿಯಾಸ್ ಈಗಾಗಲೇ 2 ಮದುವೆಯಾದರೂ ಈತನ ಕಾಮುಕತನ ನಿಂತಿಲ್ಲ, ಈತನಿಗೆ 23 ವರ್ಷದ ಹೆಂಡತಿ ಇದ್ದಾಳಂತೆ, ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಈತನ ಪತ್ನಿಯರು ನೊಂದ ಬಾಲಕಿಗೆ ಆಸ್ಪತ್ರೆಗೆ ತೋರಿಸ್ತೀವಿ, ಹಣ ಕೊಡ್ತೀವಿ, ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇಲಿಯಾಸ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಇಲಿಯಾಸ್ ನಾಪತ್ತೆಯಾಗಿದ್ದಾನೆ.
ಬಹುತೇಕ ಲೈಂಗಿಕ ಕಿರುಕುಳಗಳು ಹತ್ತಿರದ ಸಂಬಂಧಿಗಳಿಂದಲೇ ನಡೆಯುತ್ತವೆ. ಹಾಗಾಗಿ ಹೆಣ್ಣು ಹೆತ್ತವರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಯಾರೇ ಸಂಬಂಧಿಕರೇ ಆದರೂ, ಅವರ ಮೇಲೆ ಎಷ್ಟೇ ನಂಬಿಕೆಯಿದ್ದರೂ ಕೂಡ ಹೆಣ್ಣು ಮಕ್ಕಳನ್ನ ಸಂಬಂಧಿಕರಿಂದ ದೂರವೇ ಇಡಬೇಕಿದೆ. ಬೆಳೆಯುವ ಮಕ್ಕಳು ಸಣ್ಣ ವಯಸ್ಸಿನಲ್ಲೇ ದೌರ್ಜನ್ಯಕ್ಕೊಳಗಾಗುವುದನ್ನು ತಪ್ಪಿಸಲು ಪೋಷಕರೇ ಎಚ್ಚರವಹಿಸಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7